ನಿರ್ಮಾಪಕನೊಂದಿಗೆ ಸಮಂತಾ ಲವ್‌ನಲ್ಲಿ ಬಿದ್ದಿರೋದು ನಿಜನಾ? – ಫ್ಯಾನ್ಸ್‌ಗೆ ಸಿಕ್ತು ಸಾಕ್ಷಿ

Public TV
1 Min Read

ಸೌತ್ ಬೆಡಗಿ ಸಮಂತಾ (Samantha) ಮತ್ತೆ ಮತ್ತೆ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗ್ತಿದ್ದಾರೆ. ನಿರ್ಮಾಪಕ ರಾಜ್ ನಿಧಿಮೋರು ಜೊತೆ ನಟಿ ಡೇಟಿಂಗ್ ಮಾಡ್ತಿದ್ದಾರೆ ಎಂಬುದಕ್ಕೆ ಫ್ಯಾನ್ಸ್‌ಗೆ ಸಾಕ್ಷಿ ಸಿಕ್ಕಿದೆ. ಸಮಂತಾ ಹಂಚಿಕೊಂಡಿರುವ ಪೋಸ್ಟ್‌ವೊಂದರಲ್ಲಿ ಈ ಬಗ್ಗೆ ಸುಳಿವೊಂದು ನೀಡಿದ್ದಾರೆ. ಇದನ್ನೂ ಓದಿ:ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ

ನಿರ್ಮಾಪಕನ ಜೊತೆಗಿನ ಸಮಂತಾ ಡೇಟಿಂಗ್ ವಿಚಾರ ಹಲವು ಸಮಯದಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಈಗ ‘ಶುಭಂ’ (Subham) ಚಿತ್ರದ ಪ್ರಚಾರದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರದ ಫೋಟೋಗಳ ಜೊತೆ ನಿರ್ಮಾಪಕರ ಜೊತೆಗಿನ ಫೋಟೋಗಳನ್ನೂ ಹಂಚಿಕೊಂಡಿರೋದು ಡೇಟಿಂಗ್ ವಿಚಾರಕ್ಕೆ ಪುಷ್ಠಿ ಸಿಕ್ಕಿದೆ. ಇದರಿಂದ ಅಭಿಮಾನಿಗಳಿಗೂ ಉತ್ತರ ಸಿಕ್ಕಾಂಗಿದೆ. ಇದನ್ನೂ ಓದಿ:ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

 

View this post on Instagram

 

A post shared by Samantha (@samantharuthprabhuoffl)

ನಿರ್ಮಾಪಕ ರಾಜ್ ನಿಧಿಮೋರು (Raj Nidimoru) ಮತ್ತು ಸಮಂತಾ ಅವರ ಸೆಲ್ಫಿ ಎಲ್ಲರ ಗಮನ ಸೆಳೆದಿದೆ. ಸಮಂತಾ ಅವರು ಮುದ್ದಿನ ಶ್ವಾನದ ಜೊತೆಗೂ ರಾಜ್ ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇಬ್ಬರ ನಡುವೆ ಹೆಚ್ಚಿನ ಆಪ್ತತೆ ಬೆಳೆದಿರುವುದು ಖಚಿತ ಆಗಿದೆ. ಸಮಂತಾ ಕೆಲಸಗಳಿಗೂ ಅವರು ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಇಬ್ಬರೂ ಪ್ರೀತಿಸುತ್ತಿರುವ ವಿಚಾರ ನಿಜನಾ? ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಗುಡ್ ನ್ಯೂಸ್ ಕೊಡ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಅಂದಹಾಗೆ, ಸಮಂತಾ ನಿರ್ಮಾಣದ ‘ಶುಭಂ’ (Subham) ಚಿತ್ರದ ಮೇ 9ರಂದು ರಿಲೀಸ್ ಆಗಲಿದೆ. ಇದರಲ್ಲಿ ಅವರು ಮಂತ್ರವಾದಿಯ ಪಾತ್ರದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

Share This Article