ಸೈಕಲ್ ಟೈರ್‌ಗೂ ಟಿಕೆಟ್ ನೀಡಿದ ಕಂಡಕ್ಟರ್- ಪ್ರಯಾಣಿಕ ಕಂಗಾಲು

Public TV
1 Min Read

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಪ್ರಾರಂಭಿಸಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರ ಹೊಸ ಆದೇಶದಂತೆ ಕೆಎಸ್‍ರ್‍ಟಿಸಿ ಕಂಡಕ್ಟರ್ (KSRTC Bus Conductor) ಸೈಕಲ್ ಟೈರ್ ಗೂ ಸೇರಿಸಿಕೊಂಡು ಟಿಕೆಟ್ ನೀಡಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ.

ರಾಣಿಬೇನ್ನೂರು ನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆ ಎ 42 ಎಫ್ 1237 ಸಾರಿಗೆ ಬಸ್ ನಲ್ಲಿ ಈ ಘಟನೆ ನಡೆದಿದೆ. ಮಗನೊಂದಿಗೆ ಉಮೇಶ್ ಪಾಟೀಲ್ ರಾಣೇಬೆನ್ನೂರಿಂದ ಊರಿಗೆ ಮರಳಿ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಹೊರಟಿದ್ದರು. ತಂದೆ ಮತ್ತು ಮಗನ ಎರಡು ಟಿಕೆಟ್ 70 ರೂ. ನೀಡಿದ್ದು, ಸೈಕಲ್ ಟೈರ್ ಗೆ 5 ರೂ. ಹೆಚ್ಚಿನ ಹಣ ಪಡೆದು ಟಿಕೆಟ್ (Bus Ticket For Cycle Tyre) ನೀಡಿದ್ದಾರೆ. ಒಬ್ಬರಿಗೆ 35 ರೂ. ಟಿಕೆಟ್ ದರ ಇದ್ದು, ಇಬ್ಬರಿಗೆ 70 ರ ಬದಲು ಸೈಕಲ್ ಟೈರ್ ಗೆ 5 ರೂ ಹೆಚ್ಚು ಪಡೆದಿದ್ದಕ್ಕೆ ಪ್ರಯಾಣಿಕ ಕಂಗಾಲಾಗಿದ್ದಾನೆ.  ಇದನ್ನೂ ಓದಿ: ಟೊಮೆಟೋ ಬಳಕೆಯನ್ನೇ ನಿಲ್ಲಿಸಿ- ಪಂಜಾಬ್ ರಾಜ್ಯಪಾಲ ಕರೆ

ಈ ಬಗ್ಗೆ ಕಂಡಕ್ಟರ್ ಕೇಳಿದರೆ ಮೇಲಿಂದ ಆದೇಶ ಬಂದಿದೆ. ಲಗೇಜ್ ಸೀಟ್ ಅಂತಾ ಟಿಕೆಟ್ ನೀಡಿದ್ದಾನೆ. ಸೈಕಲ್ ಟೈರ್ ಲಗೇಜ್ ಹಣ ನೀಡುವಂತೆ ಪರಸ್ಥಿತಿ ಬಂದಿದೆ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್