ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

By
1 Min Read

– ದರ್ಶನ್‌-ನಾನು ಕಷ್ಟಪಟ್ಟು ಮೇಲೆ ಬಂದಿದ್ದೇವೆ
-‌ ಹಿಂದೆ ದರ್ಶನ್‌ ಫ್ಯಾನ್ಸ್‌ಗೆ ಬೈಬೇಡಿ ಅಂತ ನಾನೇ ಹೇಳಿದ್ದೆ ಎಂದ ಕಿಚ್ಚ

ಬೆಂಗಳೂರು: ಯಶ್, ದರ್ಶನ್ (Darshan), ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್‌ ಕೊಡಲ್ಲ, ಯಾಕೆ ಕೊಡಬೇಕು ಎಂದು ನಟ ಕಿಚ್ಚ ಸುದೀಪ್‌ (Kichcha Sudeep) ಹೇಳಿದ್ದಾರೆ.

ಮ್ಯಾಕ್ಸ್‌ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ಕಿಚ್ಚ ಸುದೀಪ್‌, ʻಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರುʼ ಕೇಕ್ ಕಂಟ್ರೋವರ್ಸಿಗೆ (Cake Controversy) ಕ್ಲಾರಿಟಿ ಕೊಟ್ಟಿದ್ದಾರೆ.

ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್‌ ಮಾತಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್‌ ಕೊಡಬೇಕು? ಯಶ್, ಶಿವಣ್ಣ, ಧ್ರುವ ಉಪ್ಪಿಗೆ ಬಾಸ್ ಅಂತ ಕರಿಯೋದಿಲ್ವಾ? ನನಗೂ ದರ್ಶನ್‌ಗೂ ಏನು ಇಲ್ಲ ಸರ್. ದರ್ಶನ್ ನಾನು ಇಬ್ರು ಕಷ್ಟ ಪಟ್ಟು ಮೇಲೆ ಬಂದಿದ್ದೀವಿ. ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದಾರೆ.

ಟಾಂಟ್ ಯಾಕ್ ಕೊಡ್ಬೇಕು ನಾವು.. ನಾವೇನು ಚಕ್ರವರ್ತಿಗಳಾ..? ಸಿನಿಮಾ ಮಾಡೋಣ ಖುಷಿ ಪಡೋಣ ಅಷ್ಟೇ. ಯಾರಿಗೆ ಟಾಂಗ್ ಕೊಡ್ತಾರೋ..? ಯಶ್ ಗೆ ಯಶ್ ಬಾಸ್ ಅಂತಾ ಕರಿಯೊಲ್ವಾ..? ಧ್ರುವಗೆ ಧ್ರುವ ಬಾಸ್ ಅಂತಾ ಕರಿಯಲ್ವಾ? ಶಿವಣ್ಣಗೆ ಶಿವಣ್ಣ ಬಾಸ್ ಅಂತಾ ಕರಿಯಲ್ವಾ? ಉಪ್ಪಿ ಬಾಸ್ ಅಂತಾ ಕರಿಯಲ್ವಾ..? ಒಂದು ಸಿನಿಮಾ ಹಿಟ್‌ ಆದಾಗ ಇನ್ನಷ್ಟು ಒಳ್ಳೆ ಸಿನಿಮಾ ಮಾಡೋಣ, ಚಿತ್ರರಂಗದ ಬೆಳವಣಿಗೆಗೆ ಶ್ರಮಿಸೋಣ. ನಾನು ನಮ್ ತಂದೆಗೆ ಬಾಸ್ ಅಂತಾ ಕರಿಯೋದು.. ಕನ್ನಡ ಚಿತ್ರರಂಗ ಮುಖ್ಯನಾ..? ನಾನು ಮುಖ್ಯನಾ..? ಇದೆಲ್ಲವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುದೀಪ್‌ ಹೇಳಿದ್ದಾರೆ.

Share This Article