ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಸುಟ್ಟು ತಾನು ಹೆಣವಾದ

Public TV
2 Min Read

ತಿರುವನಂತಪುರಂ: ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಮನನೊಂದ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಸುಟ್ಟು, ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕೊಚ್ಚಿಯ 17 ವರ್ಷದ ಹುಡುಗಿಯನ್ನು ಮಿಥುನ್(24) ಪ್ರೀತಿಸುತ್ತಿದ್ದನು. ಮೃತ ಹುಡುಗಿ ಹಾಗೂ ಮಿಥುನ್ ಇಬ್ಬರೂ ಸಂಬಂಧಿಗಳು. ಅಲ್ಲದೆ ಅವರಿಬ್ಬರ ಮನೆ ಅಕ್ಕಪಕ್ಕದಲ್ಲೇ ಇತ್ತು. ಆದ್ದರಿಂದ ಆಗಾಗ ಮಿಥುನ್ ಆಕೆಯ ಮನೆಗೆ ಹೋಗುತ್ತಿದ್ದನು. ಹೀಗೆ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಹೇಗೋ ಇಬ್ಬರು ಪ್ರೀತಿಸುತ್ತಿದ್ದೇವೆ ಮದುವೆ ಆಗಿಬಿಡೋಣ ಎಂದು ಮಿಧುನ್ ಪೀಡಿಸುತ್ತಿದ್ದನು. ಆದರೆ ಮದುವೆಗೆ ಹುಡುಗಿ ಒಪ್ಪಿರಲಿಲ್ಲ. ನಾನಿನ್ನೂ ಓದಬೇಕು ಎಂದು ಹೇಳಿ ಮಿಥುನ್‍ನಿಂದ ಅಂತರ ಕಾಯ್ದುಕೊಂಡಿದ್ದಳು. ಇದನ್ನೂ ಓದಿ:ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

ಆದರೂ ಕೂಡ ಮಿಥುನ್ ಸದಾ ತನ್ನನ್ನು ಮದುವೆಯಾಗು ಎಂದು ಹುಡುಗಿಯನ್ನು ಪೀಡಿಸುತ್ತಲೇ ಇದ್ದನು. ಈ ಬಗ್ಗೆ ಹುಡುಗಿಯ ಮನೆಯವರಿಗೆ ತಿಳಿದು ಅ. 7ರಂದು ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಆ ಬಳಿಕ ಬುಧವಾರ ಪ್ರೇಯಸಿ ಟ್ಯೂಷನ್‍ಗೆ ಹೋಗಿದ್ದಾಗ ಮಿಥುನ್ ಆಕೆಯನ್ನು ಭೇಟಿಯಾಗಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಬಳಿಕ ಇಬ್ಬರೂ ಅವರವರ ಮನೆಗೆ ತೆರಳಿದ್ದರು. ಇದನ್ನೂ ಓದಿ:ಯುವಕನ ಮುಂದೆ ಕೈ ಚಾಚಿ ಬೇಡಿಕೊಂಡೆ- ಪ್ರೇಮಿಯಿಂದ ಇರಿತಕ್ಕೊಳಗಾದ ಸ್ನೇಹಿತೆಯನ್ನು ನರ್ಸ್ ರಕ್ಷಿಸಿದ ಕಥೆ ಓದಿ

ಮೊದಲೇ ಮದುವೆ ಆಗಲು ನಿರಾಕರಿಸಿದ್ದಕ್ಕೆ ಮಿಥುನ್‍ಗೆ ಹುಡುಗಿ ಮೇಲೆ ಕೋಪವಿತ್ತು. ಜೊತೆಗೆ ಆಕೆ ತನ್ನ ಬಳಿ ಜಗಳವಾಡಿದಕ್ಕೆ ಕೋಪ ಹೆಚ್ಚಾಗಿತ್ತು. ಜಗಳ ನಡೆದ ಬಳಿಕವೂ ರಾತ್ರಿ ಆಕೆಯನ್ನು ಭೇಟಿಯಾಗಲು ಮಿಥುನ್ ಪ್ರಯತ್ನಿಸಿದ್ದನು. ಆಗ ಆಕೆಯ ತಂದೆ ಆತನನ್ನು ತಡೆದು, ಬುದ್ಧಿ ಹೇಳಿದ್ದರು. ಅವರ ಮಾತು ಮಿಥುನ್ ಕೇಳದಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು.

ಒಂದೆಡೆ ತಾನು ಪ್ರೀತಿಸಿದವಳು ತನ್ನನ್ನು ಮದುವೆ ಆಗಲು ಒಪ್ಪಲಿಲ್ಲ, ಇನ್ನೊಂದೆಡೆ ಆಕೆಯಿಂದ ಇಷ್ಟೆಲ್ಲಾ ಗಲಾಟೆಯಾಯ್ತಲ್ಲ ಎನ್ನುವ ಕೋಪಕ್ಕೆ ಮಿಥುನ್, ಮನೆಯಿಂದ ಹೊರಗೆ ಬಂದು ಪೆಟ್ರೋಲ್ ತಂದು, ಪ್ರೇಯಸಿಯ ಮನೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯಲ್ಲಿ ಸುಡುತ್ತಾ ನರಳುತ್ತಿದ್ದ ಮಗಳನ್ನು ರಕ್ಷಿಸಲು ಹೋದ ಸಂತ್ರಸ್ತೆಯ ತಂದೆಗೂ ಸುಟ್ಟ ಗಾಯಗಳಾಗಿದ್ದು, ತಗುಲಿದ್ದ ಬೆಂಕಿ ಆರಿಸಿ, ಅವರನ್ನು ತಕ್ಷಣ ಎರ್ನಾಕುಲಂನ ಮೆಡಿಕಲ್ ಕಾಲೇಜಿಗೆ ಸೇರಿಸುವಷ್ಟರಲ್ಲಿ ಇಬ್ಬರೂ ಪ್ರಾಣಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *