ನಾಯಕತ್ವದ ಬದಲಾವಣೆ ಚರ್ಚೆ ಹೊತ್ತಲ್ಲೇ ನವೀಕರಣ ದಾಳ ಪ್ರಯೋಗಿಸಿದ ಸಿಎಂ

1 Min Read

– ಪವರ್ ಶೇರ್ ಡೆಡ್‌ಲೈನ್‌ಗೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ

- Advertisement -

ಬೆಂಗಳೂರು: ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯ (CM Siddaramaiah) ತನ್ನ ಅಧಿಕೃತ ಕಾವೇರಿ ನಿವಾಸದ (Cauvery House) ನವೀಕರಣಕ್ಕೆ ಮುಂದಾಗಿದ್ದಾರೆ.

- Advertisement -

ಹೌದು. ಸಿದ್ದರಾಮಯ್ಯನವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನವೀಕರಣ (Renovation) ಮಾಡಿಸಿದ್ದರು. ಆದರೆ ಈಗ ಮತ್ತೆ ನವೀಕರಣಕ್ಕೆ ಹೈ ಹಾಕುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

- Advertisement -

ಕಾವೇರಿ ನಿವಾಸದ ಗ್ರೌಂಡ್‌ ಫ್ಲೋರ್‌ ನವೀಕರಣದ ಕೆಲಸ ಭರದಿಂದ ಸಾಗುತ್ತಿದೆ. ಸಾಧಾರಣವಾಗಿ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾಗ ನವೀಕರಣ ಮಾಡುವುದು ಸಾಮಾನ್ಯ. ಆದರೆ ಈಗ ಪವರ್ ಫೈಟ್ ಹೊತ್ತಿನಲ್ಲೇ ನವೀಕರಣ ಯಾಕೆ ಎಂಬ ಪ್ರಶ್ನೆ ಎದ್ದಿದೆ.

- Advertisement -

ನನ್ನ ಮತ್ತು ಸಿದ್ದರಾಮಯ್ಯ ಮಧ್ಯೆ ಒಪ್ಪಂದ ನಡೆದಿದೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ನಂತರ ಅಧಿಕಾರ ಹಂಚಿಕೆ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಮತ್ತಷ್ಟು ಬಲ ಬಂದಿತ್ತು. ಇದನ್ನೂ ಓದಿ: I love You So Much – ಅಮ್ಮನಿಗೆ ಸಂದೇಶ ಕಳುಹಿಸಿ ನೇಣಿಗೆ ಕೊರಳೊಡ್ಡಿದ ಯೂಟ್ಯೂಬರ್

 

ಮೊದಲು ದೀರ್ಘಾವಧಿ ಸಿಎಂ ದಾಖಲೆ, ನಂತರ ಮಾರ್ಚ್‌ 6ಕ್ಕೆ ದಾಖಲೆಯ 17ನೇ ಬಜೆಟ್ ಮಂಡಿಸಿದ ನಂತರ ಅಧಿಕಾರ ಹಸ್ತಾಂತರವಾಗಲಿದೆ ಎಂಬ ಮಾತುಗಳು ಹರಿದಾಡಲು ಆರಂಭವಾಯಿತು. ಈ ಎಲ್ಲದರ ಮಧ್ಯೆ ಸಿಎಂ ನವೀಕರಣಕ್ಕೆ ಮುಂದಾಗುವ ಮೂಲಕ ಈಗ ಹೊಸ ದಾಳ ಉರುಳಿಸಿದ್ದಾರೆ.

ಸಿದ್ದರಾಮಯ್ಯನವರ ಈ ನಿರ್ಧಾರದಿಂದ ಡಿಸಿಎಂ ಡಿಕೆಶಿ ಟೀಂಗೆ ಗೊಂದಲವಾಗಿದ್ದರೆ ಅಧಿಕಾರಿಗಳೂ ಗಲಿಬಿಲಿಗೊಂಡಿದ್ದಾರೆ. ನವೀಕರಣ ರಾಜಕಾರಣದ ಮೂಲಕ ಸಿದ್ದರಾಮಯ್ಯನವರು ಸದ್ಯಕ್ಕೆ ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂಬ ಸಂದೇಶ ಕಳುಹಿಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

Share This Article