ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಆದಾಯ ಖೋತಾ: ಪ್ರಹ್ಲಾದ್ ಜೋಶಿ ಆರೋಪ

Public TV
1 Min Read

ನವದೆಹಲಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಐದು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆದಾಯವನ್ನೇ ನುಂಗಿಬಿಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ CAG ವರದಿಯೇ ಈ ವಾಸ್ತವವನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್‌ನ ಐದು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳು ರಾಜ್ಯದ ಆದಾಯ ವೆಚ್ಚದ ಶೇ.15‌ ರಷ್ಟನ್ನು ವ್ಯಯಿಸಿರುವುದನ್ನು ಉಲ್ಲೇಖಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯಿಂದ 2 ಲಕ್ಷ ಮಂದಿ ಅನರ್ಹರು ಹೊರಕ್ಕೆ

CAG ವರದಿ ಪ್ರಕಾರ ಅಧಿಕ ಆದಾಯದ ರಾಜ್ಯವಾಗಿದ್ದ ಕರ್ನಾಟಕ ಈಗ ಅವೈಜ್ಞಾನಿಕ ಗ್ಯಾರಂಟಿಗಳಿಂದಾಗಿ ಆದಾಯದಲ್ಲಿ ಖೋತಾ ಕಂಡಿದೆ. ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿದೆ‌ ಎಂದಿರುವ ಸಚಿವರು, ರಾಜ್ಯ ಇನ್ನು ಆರ್ಥಿಕತೆಯಲ್ಲಿ ಸ್ಥಿರತೆ ಕಾಣಲು ಹಲವು ವರ್ಷಗಳೇ ಬೇಕಾಗಲಿದೆ ಎಂದು ಹೇಳಿದ್ದಾರೆ.

2022-23ನೇ ಹಣಕಾಸು ವರ್ಷದಲ್ಲಿ ಕರ್ನಾಟಕ ಹೆಚ್ಚುವರಿ ಆದಾಯದ ರಾಜ್ಯವಾಗಿತ್ತು. ಆದರೆ, ಈಗ ಬಂಡವಾಳ ನಷ್ಟದ ರಾಜ್ಯವಾಗಿ ಅಭಿವೃದ್ಧಿಯಲ್ಲೂ ತೀವ್ರ ಕುಂಠಿತಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಒಳಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ: ಮುಖ್ಯಮಂತ್ರಿ ಚಂದ್ರು

2023-24ನೇ ಹಣಕಾಸು ವರ್ಷದಲ್ಲಿ 46,623 ಕೋಟಿ ರೂ.ನಿಂದ 65,522 ಕೋಟಿ ರೂ.ಗೆ ಹಣಕಾಸಿನ ಕೊರತೆ ಜತೆಗೆ 9,271 ಕೋಟಿ ರೂ. ಆದಾಯ ಕೊರತೆಗೆ ಕಾರಣವಾಗಿದೆ‌ ಎಂದು ಹೇಳಿದ್ದಾರೆ.

ರಾಜ್ಯದ ಸಾಲ 63,000 ಕೋಟಿಗೆ ಏರಿಕೆ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಸಾಲವೀಗ ಬರೋಬ್ಬರಿ 63,000 ಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಕಡಿತವಾಗಿದ್ದಲ್ಲದೆ, ಅಭಿವೃದ್ಧಿ ಸಹ ಕುಂಠಿತವಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಡೀಸೆಲ್, ಹಾಲು, ವಿದ್ಯುತ್, ಮೆಟ್ರೋ, ಬಿಎಂಟಿಸಿ ಸೇರಿದಂತೆ ಹಲವು ದಿನಬಳಕೆಗಳ ಬೆಲೆ ಏರಿಸಿ ಸಾರ್ವಜನಿಕರ ಜೀವನವನ್ನು ಬಲು ದುಬಾರಿಯಾಗಿಸಿದೆ ಎಂದು ಸಚಿವ ಜೋಶಿ ಖಂಡಿಸಿದರು.

Share This Article