ರೈತರಿಗೆ ಗುಡ್‌ನ್ಯೂಸ್‌ – ರಾಜ್ಯದ ಅನ್ನದಾತರಿಗೆ ಬರ ಪರಿಹಾರ ಬಿಡುಗಡೆ

Public TV
1 Min Read

ಬೆಂಗಳೂರು: ಬರದಿಂದ (Drought) ಕಂಗೆಟ್ಟ ರೈತರಿಗೆ ಸರ್ಕಾರ ಬೆಳೆ ಪರಿಹಾರವನ್ನು (Drought Relief Fund) ಬಿಡುಗಡೆ ಮಾಡಿದೆ.

ಕೇಂದ್ರದಿಂದ ಸಿಕ್ಕಿದ 3,454 ಕೋಟಿ ರೂ. ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ‌ಮಾಡಿ ರಾಜ್ಯ ಕಂದಾಯ ಇಲಾಖೆ (State Revenue Department) ಆದೇಶ ಪ್ರಕಟಿಸಿದೆ.

ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. 223 ಬರ ಪೀಡಿತ ತಾಲ್ಲೂಕುಗಳ 33,55,599 ರೈತರಿಗೆ ಅರ್ಹತೆಗನುಸಾರವಾಗಿ 2023 ರ ಮುಂಗಾರು ಹಂಗಾಮಿನ ಬೆಳೆ ನಷ್ಟವನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಗರ್ಭಿಣಿ – ದೂರು ನೀಡಿದ್ರೆ ಕೊಲೆ ಬೆದರಿಕೆ ಹಾಕಿದ್ದ ಯುವಕ

 

ಈ ಹಿಂದೆ ಎಕರೆಗೆ ತಲಾ 2 ಸಾವಿರ ರೂ ಬೆಳೆ ನಷ್ಟ ಪರಿಹಾರವಾಗಿ 636.44 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಹಿಂದಿನ 2 ಸಾವಿರ ರೂ. ಹಿಡಿದುಕೊಂಡು ಉಳಿದ ಬೆಳೆ ನಷ್ಟ ಪರಿಹಾರ ವಿತರಿಸುವಂತೆ ಸರ್ಕಾರ ಆದೇಶ ನೀಡಿದೆ. ಇದನ್ನೂ ಓದಿ: ಅಮಿತ್‌ ಶಾ ನಕಲಿ ವೀಡಿಯೋ ಪ್ರಕರಣ – ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

 

Share This Article