ವಿಜಯಪುರ: ಜಿಲ್ಲಾಡಳಿತ ನಿರ್ಬಂಧ ತೆರವುಗೊಳಿಸಿದ ಬಳಿಲ ಇದೀಗ ಬಸವನ ಬಾಗೇವಾಡಿಯಲ್ಲಿ (Basavana Bagewadi) ನಡೆದ ಸಮಾವೇಶದಲ್ಲಿ ಕನ್ನೇರಿ (Kanneri) ಶ್ರೀಗಳಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಗುರುವಾರ (ಜ.29) ಬಸವನ ಬಾಗೇವಾಡಿಯಲ್ಲಿ ನಡೆದ ಎತ್ತಿನ ಬಂಡಿಗಳ ಸಮಾವೇಶದಲ್ಲಿ ಕನ್ನೇರಿ ಪೀಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಕರೆದರೂ ಕೂಡ ಬರುತ್ತೇನೆ ಎಂದು ಹೇಳುವ ಮೂಲಕ ಸಚಿವ ಎಂ.ಬಿ ಪಾಟೀಲ್ಗೆ ಸೆಡ್ಡು ಹೊಡೆದಿದ್ದಾರೆ.
ಇದಕ್ಕೂ ಮುನ್ನ ಸಚಿವ ಎಂ.ಬಿ ಪಾಟೀಲ್ ಕ್ಷೇತ್ರ ಬಬಲೇಶ್ವರದಲ್ಲಿಯೇ ಕಾರ್ಯಕ್ರಮ ಮಾಡಿ, ಸೆಡ್ಡು ಹೊಡೆದು ಯಶಸ್ವಿಯಾಗಿದ್ದರು. ಅದಾದ ಬಳಿಕ ಇದೀಗ ಮತ್ತೆ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿ 40 ಸಾವಿರದ ಉದ್ಯೋಗಕ್ಕೆ ಗುಡ್ಬೈ – ಊರಿನಲ್ಲಿ ಅಡಿಕೆ ಕೊನೆಕಾರನ ಕೆಲಸಕ್ಕೆ ಜೈ
ಆಗಿದ್ದಾದ್ರೂ ಏನು?
ಮಹಾರಾಷ್ಟ್ರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶ್ರೀಗಳು ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾತನಾಡಿದ್ದರು. ಇದಾದ ನಂತರ ಶ್ರೀಗಳ ಕಾರ್ಯಕ್ರಮವೊಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಿಯೋಜನೆ ಆಗಿತ್ತು. ಆದರೆ ಜಿಲ್ಲಾಡಳಿತ ಶ್ರೀಗಳಿಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ತದನಂತರ ಬಾಗಲಕೋಟೆ, ಧಾರವಾಡ ಜಿಲ್ಲೆಗೂ ಪ್ರವೇಶ ನಿರ್ಬಂಧಿಸಲಾಗಿತ್ತು.
ಈ ವೇಳೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಕನ್ನೇರಿ ಶ್ರೀಗಳ ವಿರುದ್ಧ ವಾಕ್ಸಮರ ನಡೆಸಿದ್ದರು. ಶ್ರೀಗಳು ಆ ರೀತಿ ಅವಹೇಳನಕಾರಿಯಾಗಿ ಮಾತನಾಡಿದ್ದು ತಪ್ಪು. ಅವರು ಈಗಲೇ ಕ್ಷಮೆ ಕೇಳಲಿ, ನಾನು ಹೋಗಿ ಅವರ ಪಾದ ತೊಳೆದು ಜಿಲ್ಲೆಗೆ ಕರೆದುತರುತ್ತೇನೆ ಎಂದಿದ್ದರು. ಆದರೆ ಇದಕ್ಕೆ ಒಪ್ಪದ ಶ್ರೀಗಳು ಕಾನೂನು ಹೋರಾಟ ಮಾಡಿದ್ದರು. ಆದರೆ ಹಿನ್ನಡೆ ಆಯ್ತು. ನಿರ್ಬಂಧ ತೆರವಾಗುತ್ತಿದ್ದಂತೆ ಬಸವಾದಿ ಶರಣರ ಹಿಂದೂ ಸಮಾವೇಶ ಎಂದು ಅಭೂತ ಪೂರ್ವ ಕಾರ್ಯಕ್ರಮ ಮಾಡಿದರು. ಇದೀಗ ಸಚಿವರ ವಿರುದ್ಧ ಸಮರ ಸಾರಿದ್ದಾರೆ.ಇದನ್ನೂ ಓದಿ: ಐತಿಹಾಸಿಕ ಲಕ್ಕುಂಡಿಯಲ್ಲಿ ಅಪರೂಪದ ತ್ರಿಮುಖ ನಾಗಶಿಲೆ ಪತ್ತೆ

