UGC ಹೊಸ ನೀತಿಗೆ ಸುಪ್ರೀಂ ತಡೆಯಾಜ್ಞೆ – ಹೊಸ ನಿಯಮಗಳು ಅಸ್ಪಷ್ಟವಾಗಿದೆ, ಸ್ಪಷ್ಟೀಕರಣದ ಅಗತ್ಯವಿದೆ ಎಂದ ಕೋರ್ಟ್

2 Min Read

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗಟ್ಟಲು ಯುಜಿಸಿ ನಿಯಮ (UGC Equity Rules) ಜಾರಿಗೆ ತಂದ ಹೊಸ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ.

- Advertisement -

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಈ ಮಾರ್ಗಸೂಚಿಗಳು ಸಮಾಜವನ್ನ ವಿಭಜಿಸುವ ಅಪಾಯ ಹೊಂದಿವೆ. ನಿಯಮಗಳಲ್ಲಿ ಅಸ್ಪಷ್ಟತೆಯಿದ್ದು. ಅದು ದುರ್ಬಳಕೆಯಾಗದಂತೆ ತಜ್ಞರು ಮರು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ಭಾರತ-ಇಯು ಡೀಲ್; ಐಷಾರಾಮಿ ಕಾರುಗಳು, ಬಿಯರ್‌, ವೈನ್‌, ಮೆಡಿಸಿನ್‌ – ಯಾವ್ಯಾವುದರ ಬೆಲೆ ಇಳಿಕೆ?

- Advertisement -

- Advertisement -

ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ನೋಟಿಸ್ ಜಾರಿಗೊಳಿಸಿದೆ. ಮಾರ್ಚ್ 19 ರಂದು ನೋಟಿಸ್‌ಗೆ ಉತ್ತರ ಸಲ್ಲಿಸಬೇಕು. ಸಾಲಿಸಿಟರ್ ಜನರಲ್ ನೋಟಿಸ್ ಸ್ವೀಕರಿಸಿದ್ದಾರೆ. 2019 ರಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಕೂಡ ಸಂವಿಧಾನ ಬದ್ಧತೆ ಪರಿಶೀಲನೆಗೆ ಸಂಬಂಧಿಸುತ್ತವೆ. ಆದ್ದರಿಂದ ಆ ಅರ್ಜಿಗಳನ್ನ ಇವುಗಳೊಂದಿಗೆ ಜೋಡಿಸಬೇಕು ಅಂತ ಆದೇಶಿಸಿದೆ.

- Advertisement -

ಸದ್ಯ, 2012ರಲ್ಲಿ ಜಾರಿಯಲ್ಲಿದ್ದ ಹಳೆಯ ನಿಯಮಗಳೇ ಚಾಲ್ತಿಯಲ್ಲಿ ಇರಲಿವೆ. ಪ್ರಕರಣದ ಮುಂದಿನ ವಿಚಾರಣೆಯನ್ನ ಮಾರ್ಚ್ 19ಕ್ಕೆ ನಿಗದಿಪಡಿಸಿದೆ. ಜಾತಿ ತಾರತಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್ ವೇಮುಲ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸಲ್ಲಿಸಿದ್ದ ಪಿಐಎಲ್ ಹಿನ್ನೆಲೆಯಲ್ಲಿ ಯುಜಿಸಿ ಈ ಹೊಸ ನಿಯಮಗಳನ್ನು ರೂಪಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್‌ ಪತ್ನಿ ಸುನೇತ್ರಾ ಹೆಸರು ಪ್ರಸ್ತಾಪಿಸಲು ಎನ್‌ಸಿಪಿ ಚಿಂತನೆ

ಸುಪ್ರೀಂ ಆದೇಶದ ಮುಖ್ಯಾಂಶಗಳು
* ಯುಜಿಸಿ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ
* ನಿಯಮಗಳಲ್ಲಿ ಅಸ್ಪಷ್ಟತೆಯಿದ್ದು ಮರು ಪರಿಶೀಲನೆ ಅಗತ್ಯವಿದೆ
* ಈ ನಿಯಮಗಳಿಂದ ಸಮಾಜದಲ್ಲಿ ಒಡಕು ಮೂಡುವ ಸಾಧ್ಯತೆ
* ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಇನ್ನೂ ಜಾತಿ ತಾರತಮ್ಯವನ್ನು ಎದುರಿಸುತ್ತಿದ್ದೇವೆ
* ತಾರತಮ್ಯ ವ್ಯಾಪಕವಾಗಿ ವ್ಯಾಖ್ಯಾನಿಸುವ ಸೆಕ್ಷನ್ 3(ಇ) ಇದೆ, ಸೆಕ್ಷನ್ 3(ಇ) ಇದ್ದರೂ ಸೆಕ್ಷನ್ 3(ಸಿ) ಅಗತ್ಯವೇನು..?
* ಯುಜಿಸಿ ನಿಯಮ-2026 ತಡೆಗೆ ಸುಪ್ರೀಂ ಕೋರ್ಟ್ ಆದೇಶ
* ಕೇಂದ್ರ ಸರ್ಕಾರ, ಯುಜಿಸಿಗೆ ಸುಪ್ರೀಂ ಕೋರ್ಟ್ ನೋಟಿಸ್
* ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 19ಕ್ಕೆ ನಿಗದಿ

Share This Article