ಅಪರೂಪದಲ್ಲೇ ಅಪರೂಪದ ಕಲಾವಿದ – ಮುಖವೀಣೆ ಅಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Public TV
2 Min Read

ಚಿಕ್ಕಬಳ್ಳಾಪುರ: ಅವರ ಕಲೆ ರಾಜ್ಯದಲ್ಲೇ, ಅಪರೂಪದಲ್ಲಿ ಅಪರೂಪ. ಅವರ ತರುವಾಯ ಆ ಕಲೆಯೂ ವಿನಾಶವಾಗುತ್ತದೆಂಬ ಚಿಂತೆ. ಇವೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಈ ಬಾರಿ ಅಪರೂಪದ ಈ ಕಲಾವಿದನನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ನೀಡಿ ಗೌರವಿಸಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕು ಜನಪದ ಕಲಾವಿದ ಮುಖವೀಣೆ ಅಂಜಿನಪ್ಪನವರಿಗೆ (Mukhaveene Anjinappa) ಈ ಬಾರಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಮುಖವೀಣೆ ಅಂಜಿನಪ್ಪನವರ ಹಿನ್ನಲೆ:
ಮುಖವೀಣೆ ಅಂಜಿನಪ್ಪ ಮೂಲತಃ ಕಲಾವಿದ ಕುಟುಂಬದವರು. ತಮ್ಮ ಪೂರ್ವಜರಿಂದ ಬಂದಂತಹ ಮುಖವೀಣೆ ಕಲೆಯನ್ನು ಬಾಲ್ಯದಲ್ಲೇ ಕಲಿತುಕೊಂಡು, ಹೊಟ್ಟೆ ಪಾಡಿಗಾಗಿ ಊರೂರು ಸುತ್ತಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕಲೆಯನ್ನು ದೇಶಾದ್ಯಂತ ಪ್ರಖ್ಯಾತಿಗೊಳಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆರಳೆಣಿಕೆ ಸಂಖ್ಯೆಯಲ್ಲಿರುವ ಮುಖವೀಣೆ ಕಲಾವಿದರಲ್ಲಿ ಅಂಜಿನಪ್ಪ ಕೂಡಾ ಒಬ್ಬರು. ಅಂಜಿನಪ್ಪ ಹಾಗೂ ಅವರ ಕಲೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ಗೌರವ ಸಲ್ಲಿಸುತ್ತಿದೆ.

ಮುಖವೀಣೆಯ ವೈಶಿಷ್ಟ:
ಬಾಯಿಯ ಮೂಲಕ ಹಲವು ತರಹೇವಾರಿ ನಾದಸ್ವರಗಳನ್ನು ನುಡಿಸುವ ಅಂಜಿನಪ್ಪನವರು ನಾದಸ್ವರಗಳನ್ನು ಬಾಯಿಯ ಮೂಲಕ ನುಡಿಸುತ್ತಿರುವಾಗಲೇ ಒಂದು ಮೂಗಿನ ಹೊಳ್ಳೆಯ ಮೂಲಕ ನೀರು ಒಳಹೋಗಿಸಿ, ಮತ್ತೊಂದು ಮೂಗಿನ ಹೊಳ್ಳೆಯ ಮೂಲಕ ಹೊರಬರಿಸುವಂತಹ ಅಪರೂಪದ ಕಲಾ ಪ್ರದರ್ಶನವನ್ನು ಮೈಗೂಡಿಸಿಕೊಂಡಿದ್ದಾರೆ. ಬಹಳಷ್ಟು ಎಚ್ಚರಿಕೆಯಿಂದ ಮಾಡಬೇಕಾದ ಈ ಕಲೆಯನ್ನು ಅಂಜಿನಪ್ಪನವರು ನೀರು ಕುಡಿದಷ್ಟೇ ಸಲೀಸು ಎಂಬಂತೆ ಪ್ರದರ್ಶನ ಮಾಡುತ್ತಾರೆ. ಪುಟ್ಟ ಪುಟ್ಟ ವಾದ್ಯಗಳು ಹಾಗೂ ಮುಖವೀಣೆಯಿಂದ ಹೊರಬರುವ ಇವರ ನಾದಸ್ವರಗಳು ಎಂತಹವರನ್ನೂ ಮೋಡಿ ಮಾಡುತ್ತದೆ. ಇದನ್ನೂ ಓದಿ: ಕಾಂತಾರ ಎಫೆಕ್ಟ್ : ರಿಯಲ್ ಕಾಂತಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಚಿಕ್ಕಬಳ್ಳಾಪುರದ ಸನಾದಿ ಅಪ್ಪಣ್ಣ ಎಂದೇ ಖ್ಯಾತರಾಗಿರುವ ಮುಖವೀಣೆ ಅಂಜಿನಪ್ಪನವರಿಗೆ ಈಗಾಗಲೇ ಹಲವಾರು ಪ್ರಶಸ್ತಿ ಸನ್ಮಾನಗಳು ಬಂದಿವೆ. ಆದರೂ ಅಂಜಿನಪ್ಪನವರನ್ನು ಕಾಡುತ್ತಿರುವ ಆರ್ಥಿಕ ಸಂಕಷ್ಟ ಮಾತ್ರ ದೂರವಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಅಂಜಿನಪ್ಪ ಕೀರ್ತಿ ತಂದಿದ್ದಾರೆ. ಈಗ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯ ಜನ ಹಾಗೂ ಸ್ವತಃ ಅಂಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿಧ ಪ್ರಶಸ್ತಿಗಳ ಮಧ್ಯೆ ಇದೀಗ ನಾಡಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಮುಖವೀಣೆ ಅಂಜಿನಪ್ಪನವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರ ಹಾಗೂ ದಾನಿಗಳು ಅವರ ಸಹಾಯಕ್ಕೆ ಬರಬೇಕು ಎಂದು ಪ್ರಜ್ಞಾವಂತ ಅವರ ಒಡನಾಡಿಗಳು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಜಿಲ್ಲೆಯ ಶಿಕ್ಷಣ ತಜ್ಞ ಕೋಡಿರಂಗಪ್ಪನವರಿಗೆ ಪ್ರಶಸ್ತಿ:
ಈ ಬಾರಿ ಮುಖವೀಣೆ ಅಂಜಿನಪ್ಪನವರ ಜೊತೆಯಲ್ಲೇ ಜಿಲ್ಲೆಯ ಶಿಕ್ಷಣ ತಜ್ಞ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೋಡಿ ರಂಗಪ್ಪನವರು ಕೂಡಾ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *