ಜಯಣ್ಣ ಪಾಲಾದ ‘ಜೈಲರ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕು

Public TV
2 Min Read

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಜಯಣ್ಣ (Jayanna) ಮತ್ತೊಂದು ಮೆಗಾ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸುತ್ತಿದ್ದಾರೆ. ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ (Jailer) ಸಿನಿಮಾದ ಕರ್ನಾಟಕ ವಿತರಣಾ (Distributed) ಹಕ್ಕು ಜಯಣ್ಣಗೆ ಸಿಕ್ಕಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡದೊಂದು ಗೆಲುವು ಕಾಣದ ಜಯಣ್ಣಗೆ ಈ ಸಿನಿಮಾ ಕೈ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

ಒಂದು ಕಡೆ ಸಿನಿಮಾವನ್ನು ರಿಲೀಸ್ ಮಾಡಲು ದೇಶಾದ್ಯಂತ ಸರ್ವಸಿದ್ದತೆ ನಡೆಸಿದ್ದರೆ, ಮತ್ತೊಂದು ಕಡೆ  ಚಿತ್ರದ ಟೈಟಲ್ (Title) ತಂಡಕ್ಕೆ ಸಂಕಷ್ಟ ತಂದಿದೆ ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಮಲಯಾಳಂ (Malayalam) ನಿರ್ದೇಶಕರೊಬ್ಬರು ಟೈಟಲ್ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರದಿತ್ತು.

ಈಗ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಮೊದಲು ಜೈಲರ್ ಹೆಸರಿನಲ್ಲಿ ತಾವು ಸಿನಿಮಾ ಮಾಡಿದ್ದರಿಂದ ಮತ್ತು ಮಲಯಾಳಂನಲ್ಲಿ ತಮಗೆ ರಜನಿ ಸಿನಿಮಾದಿಂದ ತೊಂದರೆ ಆಗುವುದರಿಂದ, ಟೈಟಲ್ ಬದಲಾಯಿಸುವಂತೆ ಅವರು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.

 

ಅಣ್ಣಾತ್ತೆ ಬಳಿಕ ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು‌ ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ‌ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್