ನಪುಂಸಕರು ಯಾರು ಅಂತ ಇಡೀ ರಾಷ್ಟ್ರಕ್ಕೆ ಗೊತ್ತಿದೆ – ಸಿದ್ದುಗೆ ಶೆಟ್ಟರ್ ಟಾಂಗ್

Public TV
2 Min Read

ಗದಗ: ನಪುಂಸಕರು ಯಾರು ಅಂತ ಇಡೀ ರಾಷ್ಟ್ರಕ್ಕೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್ ನಪುಂಸಕರ ಸಂಘ ಹಾಗೂ ಆರ್‌ಎಸ್‌ಎಸ್ ಮೂಲಕ್ಕೆ ಕೈ ಹಾಕಿದ್ದ ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಮಾತಿನ ತಿರುಗೇಟು ನೀಡಿದ್ದಾರೆ. ಗದಗದಲ್ಲಿ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಪರ ಮತಯಾಚಣೆಗೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಪುಂಸಕರು ಯಾರು? ಏನು ಅನ್ನುವಂತಹದ್ದು, ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಕಾಂಗ್ರೆಸ್ ಇಡೀ ರಾಷ್ಟ್ರದಲ್ಲಿ ಯಾವ ಪರಿಸ್ಥಿತಿಗೆ ಬಂದಿದೆ ಅಂದರೆ, ಅದರಲ್ಲಿ ಅವರು ನಪುಂಸಕರು ಎಂದು ತೋರಿಸುತ್ತದೆ. ಅವರು ನಪುಂಸಕರು ಅಂತ ತಮಗೆ ತಾವೇ ಸಾಬೀತು ಮಾಡಿಕೊಂಡಿದ್ದಾರೆ. ಪಂಜಾಬ್‍ನಲ್ಲಿ ಏನಾಯಿತು. ಇನ್ನು ಮುಂಬರುವ ಹಿಮಾಚಲ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಸಹ ಇರುವುದಿಲ್ಲ. ಮುಂಬರುವ ಚುನಾವಣೆ ಕಾಂಗ್ರೆಸ್ ನಪೂಂಸಕತೆಗೆ ಒಂದು ಸಾಕ್ಷಿಯಾಗಲಿದೆ ಎಂದು ವ್ಯಂಗ್ಯವಾಡಿದರು.

ಆರ್‌ಎಸ್‌ಎಸ್ 1925ರಲ್ಲಿ ಸ್ಥಾಪನೆ ಆಯಿತು. ಆಗ ಅದನ್ನು ಹೆಡ್ಗೆವಾರ್ ಸ್ಥಾಪನೆ ಮಾಡಿದರು. ಹೆಡ್ಗೆವಾರ್ ಸಹ ಮೊದಲು ಕಾಂಗ್ರೆಸ್‍ನಲ್ಲಿದ್ದರು ಅದನ್ನು ತಿಳಿದುಕೊಳ್ಳಲಿ. ಸೋನಿಯಾ ಗಾಂಧಿ ಅವರು ಎಲ್ಲಿಂದ ಬಂದರು ಅಂತ ಮೊದಲು ಹೇಳಲಿ. ಸೋನಿಯಾ ಗಾಂಧಿ ಇಟಲಿ ನಾಯಕರು, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಇದೆ. ಸೋನಿಯಾ ಗಾಂಧಿ ಆರ್ಯನ್ ರಾ? ಅಥವಾ ದ್ರಾವಿಡ್ ರಾ ಅಂತ ಮೊದಲು ಕಾಂಗ್ರೆಸ್ ಹೇಳಲಿ ಎಂದು ಗುಡುಗಿದರು. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

ಸಿದ್ಧರಾಮಯ್ಯ, ಡಿಕೆಶಿ ನಡುವೆ ಬಹಳಷ್ಟು ಇಂಟರ್ನಲ್ ಸಂಘರ್ಷವಿದೆ. ಇಬ್ಬರ ಕಚ್ಚಾಟದಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ. ಇಬ್ಬರಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂಬ ಹೊಡೆದಾಟ ಇದೆ. ಈ ಹೊಡೆದಾಟದಿಂದಲೇ ಕಾಂಗ್ರೆಸ್ ಸಂಪೂರ್ಣ ನಿರ್ಣಾಮ ಆಗಲಿದೆ. ಪಂಜಾಬ್‍ದಲ್ಲಿ ಸಿಧು, ಕರ್ನಾಟಕದಲ್ಲಿ ಒಬ್ಬ ಸಿದ್ದು ಕಾಂಗ್ರೆಸ್ ನಾಶ ಮಾಡುತ್ತಾರೆ ಅಂತ ವ್ಯಂಗ್ಯ ಮಾತುಗಳನ್ನಾಡಿದರು.

ರಾಜ್ಯದ ಕಾಂಗ್ರೆಸ್‍ನಲ್ಲಿ ಯಾರು ಮುಂದಿನ ಮುಖ್ಯಮಂತ್ರಿ ಅಂತ ಘೋಷಣೆ ಮಾಡಲಿ ನೋಡೋಣ. ಆಕಸ್ಮಾತ್ ಘೋಷಣೆ ಮಾಡಿದರೆ, ಅಂದೇ ಕಾಂಗ್ರೆಸ್ ಪಕ್ಷ ನಿರ್ಣಾಮ ಆಗುತ್ತದೆ ಅಂತ ಭವಿಷ್ಯ ನುಡಿದರು. ಕಾಂಗ್ರೆಸ್‍ನವರಿಗೆ ಬೆಳಗ್ಗೆಯಿಂದ ಸಂಜೆವರೆಗೂ ಆರ್‌ಎಸ್‌ಎಸ್ ಟೀಕೆ ಮಾಡುವುದೇ ಹವ್ಯಾಸವಾಗಿದೆ. ಕಾಂಗ್ರೆಸ್ ಅವರಿಗೆ ಆರ್‍ಎಸ್‍ಎಸ್ ಬಗ್ಗೆ ಟೀಕೆ ಮಾಡದಿದ್ದರೆ ಊಟ ಮಾಡಿದ್ದು ಜೀರ್ಣವಾಗುವುದಿಲ್ಲ. ಇದು ಬಹಳ ದಿವಸ ನಡೆಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

ಈ ವೇಳೆ ಸಚಿವ ಸಿಸಿ ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಎಸ್.ವಿ ಸಂಕನೂರ, ರಾಮಣ್ಣ ಲಮಾಣಿ, ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *