ಹೆಜ್ಬೊಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ – 11 ಮಂದಿ ಸಾವು

1 Min Read

ಬೈರುತ್: ಅಮೆರಿಕ-ಇರಾನ್‌ (US-Iran) ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಹೆಜ್ಬೊಲ್ಲಾ (Hezbollah) ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ (Israel) ನಡೆಸಿದ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.

- Advertisement -

ದಕ್ಷಿಣ ಲೆಬನಾನ್‌ನ ಟೈರ್ ಬಳಿಯ ಮಾರೂಬ್ ಮೇಲೆ ಇಸ್ರೇಲಿ ದಾಳಿ ನಡೆಸಿದೆ. ದಕ್ಷಿಣ ಪಟ್ಟಣವಾದ ಬಿಂಟ್ ಜೆಬೈಲ್‌ನಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಹೆಜ್ಬೊಲ್ಲಾ ನಡುವೆ ತೀವ್ರ ಘರ್ಷಣೆಗಳು ನಡೆದಿವೆ ಎಂದು ವರದಿ ಮಾಡಿದೆ. ಇದನ್ನೂ ಓದಿ: ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಮಾತುಕತೆ ವಿಫಲ: ಇರಾನ್‌ ಬೇಸರ

- Advertisement -

ಇಸ್ರೇಲಿ ಪಡೆಗಳು, ಹೆಜ್ಬೊಲ್ಲಾ ಕಾರ್ಯಕರ್ತರು ಮತ್ತು ಮೂಲಸೌಕರ್ಯಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಪಟ್ಟಣವನ್ನು ಸುತ್ತುವರೆದಿವೆ. ಇಸ್ರೇಲಿ ಪಡೆಗಳು ಬಿಂಟ್ ಜೆಬೈಲ್‌ನಲ್ಲಿ ಉಳಿದ ನೆರೆಹೊರೆಗಳಿಗೆ ನುಸುಳಲು ಮತ್ತು ನಿಯಂತ್ರಣ ಸಾಧಿಸಲು ಇನ್ನೂ ಪ್ರಯತ್ನಿಸುತ್ತಿವೆ ಎನ್ನಲಾಗಿದೆ.

- Advertisement -

- Advertisement -

ಮಧ್ಯಪ್ರಾಚ್ಯ ಹಾಗೂ ಗಲ್ಫ್‌ನಲ್ಲಿ ಯುದ್ಧ ನಿಲ್ಲಿಸಲು ಇರಾನ್‌ ಮತ್ತು ಅಮೆರಿಕ ನಡುವೆ ಶನಿವಾರ ಸಂಧಾನ ಸಭೆ ನಡೆಯಿತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಗಿದೆ. ಇದನ್ನೂ ಓದಿ: ಇರಾನ್‌-ಅಮೆರಿಕ ಸಂಧಾನ ಮಾತುಕತೆ ವಿಫಲ – ‘ಕಹಿ ಸುದ್ದಿ’ ಎಂದ ಯುಎಸ್‌ ಉಪಾಧ್ಯಕ್ಷ

Share This Article