ನವದೆಹಲಿ: ಅಮೆರಿಕ-ಇಸ್ರೇಲ್-ಇರಾನ್ ಭೀಕರ ಯುದ್ಧದ (Iran-Israel War) ಪರಿಣಾಮದಿಂದಾಗಿ ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 50 ಶತಕೋಟಿ ಡಾಲರ್ ನಷ್ಟವಾಗಿದೆ. ವಿಶ್ವದ 20 ಅತಿದೊಡ್ಡ ವಿಮಾನಯಾನ ಸಂಸ್ಥೆಗಳು 53 ಶತಕೋಟಿ ಮೌಲ್ಯವನ್ನು ಕಳೆದುಕೊಂಡಿವೆ ಎಂದು ವರದಿಯಾಗಿದೆ.
ಕೋವಿಡ್ ನಂತರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಸಂಸ್ಥೆಗಳಿಗೆ ಮತ್ತೊಂದು ಹೊಡೆತ ಬಿದ್ದಿದೆ. ಆದರೆ, ದೇಶದಲ್ಲಿ ವಿಮಾನ ಟಿಕೆಟ್ ದರಗಳು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಜೊತೆಗೆ ಮೈತ್ರಿ ಇಲ್ಲ, ನಮ್ಮ ಸಿದ್ಧಾಂತ ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ: ದಳಪತಿ ವಿಜಯ್
ಜಾಗತಿಕವಾಗಿ ತೈಲ ಬೆಲೆ ಏರ್ ಟರ್ಬೈನ್ ಇಂಧನ ಮೇಲೆ ಪರಿಣಾಮ ಬೀರಿದೆ. ಏಪ್ರಿಲ್ 1ರಿಂದ ಹೊಸ ಪ್ರಯಾಣ ದರ ಪರಿಷ್ಕರಣೆ ಆಗಲಿದೆ ಎಂದಿದ್ದಾರೆ. ಈಗಾಗಲೇ ಕೆಲ ವಿಮಾನಯಾನ ಸಂಸ್ಥೆಗಳು ದರ ಹೆಚ್ಚಿಸಿವೆ. ಇದನ್ನೂ ಓದಿ: ದಾವಣಗೆರೆಯಲ್ಲಿ ʻಕೈʼಗೆ ಬಂಡಾಯದ ಬಿಸಿ – ಸಾಮೂಹಿಕ ನಾಮಪತ್ರ ಸಲ್ಲಿಕೆಗೆ ಮುಸ್ಲಿಂ ಮುಖಂಡರ ನಿರ್ಧಾರ

