ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

2 Min Read

– ವಾಣಿಜ್ಯ ಸಿಲಿಂಡರ್‌ಗೆ ಬಳಕೆದಾರರಿಂದ ಸುಲಿಗೆ

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಲ್ಲಿ ʻಎನರ್ಜಿ ಎಮರ್ಜೆನ್ಸಿʼ (Energy Emergency) ಸೃಷ್ಟಿ ಆಗಿಬಿಡುತ್ತಾ ಅನ್ನೋ ಕಳವಳ ಹೆಚ್ಚಾಗ್ತಿದೆ. ಕೊರೊನಾ ಬಳಿಕ ಜಗತ್ತಿನಲ್ಲಿ ಮೊದಲ ಬಾರಿಗೆ ಅನಿಲ ಸಂಕಷ್ಟ ಎದುರಾಗೋ ಆತಂಕ ಮನೆ ಮಾಡಿದೆ.

ರಾಜ್ಯದಲ್ಲೂ ಪೆಟ್ರೋಲ್-ಡೀಸೆಲ್ (Petrol-Diesel) ಸಿಗಲ್ಲ ಅನ್ನೋ ಗಾಳಿಸುದ್ದಿಗೆ ಜನ ಎದ್ನೋ ಬಿದ್ನೋ ಅಂತ ಬಂಕ್‌ಗಳಿಗೆ ಲಗ್ಗೆ ಇಟ್ಟಿದ್ದಾರೆ. ಬೆಂಗಳೂರು, ಬೀದರ್, ಶಿವಮೊಗ್ಗ, ಯಾದಗಿರಿ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.

ಬೆಂಗಳೂರಿನ ಸುತ್ತಮುತ್ತ ಆನೇಕಲ್, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಕಡೆ ತೈಲ ಪೂರೈಕೆ ಆಗುತ್ತಿಲ್ಲ ಅಂತ ಡೀಲರ್‌ಗಳು ಆರೋಪ ಮಾಡಿದ್ದಾರೆ. ಇದನ್ನೂ ಓದಿ: 2ನೇ ಮದ್ವೆಯಾಗ್ತಿದ್ದ ಗಂಡ – ತಾಳಿ ಕಟ್ಟೋ ವೇಳೆ ಮೊದಲ ಹೆಂಡ್ತಿ ಎಂಟ್ರಿ; ಮದುವೆ ರದ್ದು, ಪತಿ ಪೊಲೀಸರ ಅತಿಥಿ

ಇನ್ನು, ರಾಜ್ಯದ ಹಲವೆಡೆ ಗ್ಯಾಸ್ ಪರದಾಟ ಹೆಚ್ಚಾಗ್ತಿದೆ. ಕಲಬುರಗಿಯ ಆಳಂದ ಪಟ್ಟಣದ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್‌ಗಾಗಿ ಜನ ರಾತ್ರಿಯೆಲ್ಲಾ ರಸ್ತೆಯಲ್ಲೇ ಮಲಗಿದ್ದರು. ಸನಾ ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂದೆ ಮಕ್ಕಳು, ಮಹಿಳೆಯರು, ಸರ್ಕಾರಿ ನೌಕರರು ಕಿ.ಮೀ.ಗಟ್ಟಲೇ ಕಾದು ಕೂತಿದ್ದರು.

ಬೆಳಗ್ಗೆ ಬಿಸಿಲಿನಲ್ಲಿ ಕಾಯ್ತಿದ್ದ ಯುವಕ ಅಸ್ವಸ್ಥ ಕೂಡ ಆದ. ಜನ ಆಸ್ಪತ್ರೆಗೆ ಕರೆದೊಯ್ದರು. ಏಜೆನ್ಸಿಯವರು ಸರಿಯಾದ ಸಮಯಕ್ಕೆ ಹೋಂ ಡೆಲಿವರಿ ಕೊಡ್ತಿಲ್ಲ. ನಾವೇ ತಗೊಂಡ್ ಹೋಗ್ತೇವೆ ಕೊಡಿ ಅಂತ ಪ್ಟು ಹಿಡಿದರು. ಬಳ್ಳಾರಿಯ ಸಂಡೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ವಾಹನಗಳಿಗೆ ಮುಗಿಬೀಳ್ತಿದ್ದಾರೆ. ಇದನ್ನೂ ಓದಿ: ಮತ್ತೊಂದು ʻಮನಿ ಬ್ಯಾಗ್ʼ ಕೇಸ್ – 6 ಲಕ್ಷ ಹಣದೊಂದಿಗೆ ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ

ಹೆಚ್ಚುವರಿ 50 ರೂಪಾಯಿ ಕೊಟ್ಟೂ ತಗೊಂಡ್ ಹೋಗ್ತಿದ್ದಾರೆ. ಮಡಿಕೇರಿಯಲ್ಲಿ ಟೋಟಲ್ ಗ್ಯಾಸ್ ಏಜೆನ್ಸಿಯವರು ಮಂಗಳೂರಿನಿಂದ ಒಂದು ಲೋಡ್ ಗ್ಯಾಸ್ ತರಿಸಿ ಗ್ರಾಹಕರಿಗೆ ಕೊಟ್ಟರು. ಆದರೆ, ವಾಣಿಜ್ಯ ಸಿಲಿಂಡರ್‌ಗೆ 2,500 ರೂ. ಬದಲಿಗೆ 3,950 ರೂ. ಪಡೆದಿದ್ದಾರೆ ಅಂತ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಾಲ ತೀರಿಸಲು ಸಾಲ ಮಾಡುವ ಪರಿಸ್ಥಿತಿ, ನಿಗಮ-ಇಲಾಖೆಗಳಿಗೆ ಹಣ ಕಡಿತ: ವಿಪಕ್ಷ ನಾಯಕ ಆರ್‌.ಅಶೋಕ್‌

Share This Article