ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?

Public TV
1 Min Read

ನವದೆಹಲಿ: ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದಲಿನ ದಾಸ್ತಾನು ಕಡಿಮೆಯಾಗುತ್ತಿದೆ. ಇದರಿಂದ ಭಾರತ ವಿದ್ಯುತ್ ಬಿಕ್ಕಟ್ಟು ಎದುರಿಸುವ ಹಂತದಲ್ಲಿದೆ. ಬರುವ ಜುಲೈ-ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದು ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್‌ಏರ್ಸ್ (CREA) ಸಂಸ್ಥೆ ವರದಿ ಮಾಡಿದೆ.

ಪ್ರಸ್ತುತ ದೇಶದ ಪಿಟ್‌ಹೆಡ್ ಪವರ್ ಸ್ಟೇಷನ್‌ಗಳಲ್ಲಿ 13.5 ದಶಲಕ್ಷ ಟನ್‌ಗಳು ಹಾಗೂ ದೇಶಾದ್ಯಂತ ಇರುವ ವಿದ್ಯುತ್ ಸ್ಥಾವರಗಳಲ್ಲಿ ಒಟ್ಟು 20.7 ದಶಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಾಗಿದೆ. ಮುಂದಿನ ಜುಲೈ ಆಗಸ್ಟ್ ತಿಂಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಸ್ಥಗಿತಗೊಳ್ಳಲಿದ್ದು, ವಿದ್ಯುತ್ ಬಿಕ್ಕಟ್ಟು ಎದುರಾಗಬಹುದು ಎಂದು ಸಿಆರ್‌ಇಎ ಅಂದಾಜಿಸಿದೆ. ಇದನ್ನೂ ಓದಿ: ಏಪ್ರಿಲ್‌ನಲ್ಲಿ ಕಲ್ಲಿದ್ದಲು ಕೊರತೆ ಆಗಿಲ್ಲ ಅಂತ ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿದ್ರಾ?

ಇಂಧನ ಕ್ಷೇತ್ರ ಹಾಗೂ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವ ಸ್ವತಂತ್ರ ಸಂಸ್ಥೆಯಾದ ಸಿಆರ್‌ಇಎ, ಇತ್ತೀಚಿನ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ. ಅಧಿಕೃತವಾಗಿ ಲಭ್ಯವಿರುವ ಮಾಹಿತಿಯನ್ನು ಕ್ರೋಢೀಕರಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಬರುವ ದಿನಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಸ್ವಲ್ಪವೇ ಹೆಚ್ಚಳ ಕಂಡುಬಂದರೂ, ಅದಕ್ಕೆ ಸ್ಪಂದಿಸುವ ಸ್ಥಿತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಇಲ್ಲ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳಿ: ಯುವ ಬಿಜೆಪಿ

ಸಂಭಾವ್ಯ ಸಮಸ್ಯೆಯನ್ನು ಎದುರಿಸುವ ಸಲುವಾಗಿ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯಪ್ರಮಾಣದ ಕಲ್ಲಿದ್ದಲನ್ನು ಪೂರೈಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ನೈರುತ್ಯ ಮುಂಗಾರಿನ ಆರಂಭವು ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಸಾಗಣೆ ಮೇಲೆ ಪರಿಣಾಮವನ್ನುಂಟು ಮಾಡಲಿದೆ. ದೇಶದ ಸ್ಥಾವರಗಳಲ್ಲಿನ ದಾಸ್ತಾನು ಖಾಲಿಯಾಗುತ್ತಿರುವಂತೆಯೇ, ಕಲ್ಲಿದ್ದಲನ್ನು ಮರುಭರ್ತಿ ಮಾಡದೇ ಇದ್ದರೆ ವಿದ್ಯುತ್ ಸಮಸ್ಯೆ ಕಾಡಲಿದೆ ಎಂದೂ ವರದಿ ಪ್ರತಿಪಾದಿಸಿದೆ.

ಇತ್ತೀಚೆಗೆ ದೇಶದಲ್ಲಿ ಕಂಡುಬಂದಿದ್ದ ವಿದ್ಯುತ್ ಸಮಸ್ಯೆಗೆ ಕಲ್ಲಿದ್ದಲ್ಲಿನ ಉತ್ಪಾದನೆಯೇ ಕಾರಣವಾಗಿರಲಿಲ್ಲ. ಅದರ ವಿತರಣೆ ಹಾಗೂ ಆಡಳಿತ ವ್ಯವಸ್ಥೆಯ ಉದಾಸೀನತೆಯೇ ಕಾರಣವಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *