ಮಾ.28ಕ್ಕೆ IPL ಉದ್ಘಾಟನಾ ಪಂದ್ಯ – ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್, ಎಲ್ಲಿ ಪಾರ್ಕ್ ಮಾಡ್ಬೋದು?

2 Min Read

ಬೆಂಗಳೂರು: ಮಾ.28ರಿಂದ 2026ನೇ ಸಾಲಿನ ಐಪಿಎಲ್ (IPL 2026) ಆವೃತ್ತಿ ಆರಂಭವಾಗುತ್ತಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂ (M.Chinnaswamy Stadium) ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದ್ದು, ಕೆಲವೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷ ಜೂ.4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿತ್ತು. ಹೀಗಾಗಿ ಈ ಬಾರಿ ಯಾವುದೇ ಲೋಪಗಳಾಗದಂತೆ ಪೊಲೀಸ್ ಇಲಾಖೆ ಹಾಗೂ ಸಂಚಾರಿ ಪೊಲೀಸರು ಕೆಲವು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕನಿಷ್ಠ 4-5 ಟಿಕೆಟ್‌ ಕೊಡಿಸಿ – ಶಾಸಕರಿಂದ ಪಕ್ಷಾತೀತ ಬೇಡಿಕೆ

ಮಾ.28ರಿಂದ 2026ನೇ ಸಾಲಿನ ಐಪಿಎಲ್ (IPL 2026) ಆವೃತ್ತಿ ಆರಂಭವಾಗುತ್ತಿದೆ. ಮೊದಲ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್‌ ಮುಖಾಮುಖಿಯಾಗಲಿವೆ.

ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರಿ ಪೊಲೀಸರು ಅಲರ್ಟ್ ಘೋಷಿಸಿದ್ದು, ಟ್ರಾಫಿಕ್ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಸುಗಮ ಸಂಚಾರಕ್ಕಾಗಿ ವ್ಯವಸ್ಥೆ ಮಾಡಿದ್ದಾರೆ. ಪಂದ್ಯ ವೀಕ್ಷಿಸಲು ಬರುವವರಿಗೆ ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್‌ಪ್ ಮತ್ತು ಡ್ರಾಪ್ ಮಾಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್ ಕೊರತೆಯಿರುವುದರಿಂದ ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿದೆ.

ಎಲ್ಲೆಲ್ಲಿ ವಾಹನಗಳ ನಿಲುಗಡೆ ನಿಷೇಧ?

  1. ಕ್ವೀನ್ಸ್ ರಸ್ತೆ – ಬಾಲೇಕುಂದ್ರಿ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್ ಹಾಗೂ CTO ಜಂಕ್ಷನ್‌ವರೆಗೆ
  2. ಎಂ.ಜಿ ರಸ್ತೆ – ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ
  3. ಲಿಂಕ್ ರಸ್ತೆ – ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ
  4. ರಾಜಭವನ ರಸ್ತೆ – ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ
  5. ಸೆಂಟ್ರಲ್ ಸ್ಟ್ರೀಟ್ ರಸ್ತೆ ಎರಡೂ ಬದಿಯಲ್ಲಿ
  6. ಕಬ್ಬನ್ ರಸ್ತೆ – CTO ಸರ್ಕಲ್‌ನಿಂದ ಡಿಕ್ಕನ್ಸನ್ ರಸ್ತೆ ಜಂಕ್ಷನ್‌ವರೆಗೆ
  7. ಕಾಮರಾಜ್ ರಸ್ತೆ ಜಂಕ್ಷನ್‌ನಿಂದ ಡಿಕ್ಕನ್ಸನ್ ರಸ್ತೆ ಜಂಕ್ಷನ್‌ವರೆಗೆ (BMTC ಬಸ್ ಹೊರತುಪಡಿಸಿ ಇತರೆ ವಾಹನಗಳಿಗೆ ನಿಲುಗಡೆ ಇಲ್ಲ)
  8. ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ಸರ್ಕಲ್‌ವರೆಗೆ
  9. ಮ್ಯೂಸಿಯಂ ರಸ್ತೆ – ಎಂ.ಜಿ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಆಶೀರ್ವಾದಂ ಸರ್ಕಲ್‌ವರೆಗೆ
  10. ಕಸ್ತೂರಬಾ ರಸ್ತೆ – ಕ್ವೀನ್ಸ್ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ
  11. ಮಲ್ಯ ಆಸ್ಪತ್ರೆ ರಸ್ತೆ – ಸಿದ್ಧಲಿಂಗಯ್ಯ ಸರ್ಕಲ್‌ನಿಂದ ಆರ್.ಆರ್.ಎಂ ಸರ್ಕಲ್‌ವರೆಗೆ
  12. ಕಬ್ಬನ್ ಪಾರ್ಕ್ ಒಳಗೆ – ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ್, ಫೌಂಟೇನ್ ರಸ್ತೆ
  13. ಲ್ಯಾವೆಲ್ಲಿ ರಸ್ತೆ – ಕ್ವೀನ್ಸ್ ಸರ್ಕಲ್‌ನಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ
  14. ವಿಠಲ್ ಮಲ್ಯ ರಸ್ತೆ – ಸಿದ್ಧಲಿಂಗಯ್ಯ ಸರ್ಕಲ್‌ನಿಂದ ಬಿಷಪ್ ಕಾಟನ್ ಗರ್ಲ್ಸ್ ಶಾಲೆವರೆಗೆ

ಪಾರ್ಕಿಂಗ್ ವ್ಯವಸ್ಥೆ:
1. ಪಂದ್ಯ ವೀಕ್ಷಣೆ ಮಾಡಲು ಬರೋರಿಗೆ ಸೇಂಟ್ ಜೋಸೆಫ್ ಯೂರೋಪಿಯನ್ ಶಾಲೆ ಮೈದಾನ, ಫ್ರೀಡಂ ಪಾರ್ಕ್ MLCP ಪಾರ್ಕಿಂಗ್, ಗರುಡ ಮಾಲ್ ಪಾರ್ಕಿಂಗ್, ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ), ಯುಬಿಸಿಟಿ ಪಾರ್ಕಿಂಗ್‌ನಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ

ಓಲಾ / ಉಬರ್ / ಆಟೋ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳಗಳು:
• BRV ಗ್ರೌಂಡ್ – ಗೇಟ್ ನಂ. 06 ಬಳಿ
• ಮಾಣಿಕ್ ಶಾ ಪೆರೇಡ್ ಗ್ರೌಂಡ್ – ಗೇಟ್ ನಂ. 03 ಬಳಿ.ಇದನ್ನೂ ಓದಿ: Explainer | ಉದಯೋನ್ಮುಖ ಪ್ರತಿಭೆಗಳ ಹಬ್ಬ – ಮಾ.28 ರಿಂದ ಐಪಿಎಲ್‌ ಟೂರ್ನಿ ಶುರು; ಏನುಂಟು ವಿಶೇಷ?

Share This Article