ಮೇ 31 ರಂದು ಬೆಂಗಳೂರಲ್ಲೇ ಐಪಿಎಲ್‌ ಫೈನಲ್‌ – 2ನೇ ಹಂತದ ವೇಳಾಪಟ್ಟಿ ರಿಲೀಸ್‌

2 Min Read

ಬೆಂಗಳೂರು/ಮುಂಬೈ: 19ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ಫೈನಲ್‌ (IPL Final) ಪಂದ್ಯವು ಮೇ 31 ರಂದು ಬೆಂಗಳೂರಿನಲ್ಲೇ (Bengaluru) ನಡೆಯಲಿದೆ.

ಐಪಿಎಲ್ ಸಮಿತಿಯು ಗುರುವಾರ 2ನೇ ಹಂತದ ವೇಳಾಪಟ್ಟಿ ಬಿಡುಗಡೆಮಾಡಿದ್ದು, ಅದರಂತೆ ಲೀಗ್ ಹಂತದ ಪಂದ್ಯಗಳು ಮೇ 24ರಂದು ಕೊನೆಗೊಳ್ಳಲಿವೆ. ಇದನ್ನೂ ಓದಿ: ಮಾ.28ಕ್ಕೆ IPL ಉದ್ಘಾಟನಾ ಪಂದ್ಯ – ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್, ಎಲ್ಲಿ ಪಾರ್ಕ್ ಮಾಡ್ಬೋದು?

ಕಳೆದವಾರ ಬಿಡುಗಡೆ ಮಾಡಿದ್ದ ಮೊದಲ ಹಂತದ ವೇಳಾಪಟ್ಟಿಯಲ್ಲಿ ಮೊದಲ ಹಂತದಲ್ಲಿ ಮಾರ್ಚ್‌ 28 ರಿಂದ ಏಪ್ರಿಲ್ 12 ರ ವರೆಗಿನ ಪಂದ್ಯಗಳ ಮಾಹಿತಿ ನೀಡಲಾಗಿತ್ತು. ಉದ್ಘಾಟನಾ ಪಂದ್ಯವು ಬೆಂಗಳೂರಿನಲ್ಲಿ ‘ಹಾಲಿ ಚಾಂಪಿಯನ್’ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ನಡೆಯಲಿದೆ. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ನೋಡಲು 4 ಟಿಕೆಟ್‌ ಕೊಡಿಸಿ: ಶಾಸಕರಿಂದ ಪಕ್ಷಾತೀತ ಬೇಡಿಕೆ

‘ಏಪ್ರಿಲ್ 13 ರಿಂದ ಮೇ 24ರ ವರೆಗಿನ ಪಂದ್ಯಗಳ ಎರಡನೇ ಹಂತದ ವೇಳಾಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಭಾರತದ 12 ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ ಮತ್ತು ನವಚಂಡೀಗಢದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಹೇಳಿದ್ದಾರೆ. ಇದನ್ನೂ ಓದಿ: Explainer | ಉದಯೋನ್ಮುಖ ಪ್ರತಿಭೆಗಳ ಹಬ್ಬ – ಮಾ.28 ರಿಂದ ಐಪಿಎಲ್‌ ಟೂರ್ನಿ ಶುರು; ಏನುಂಟು ವಿಶೇಷ?

ಎರಡನೇ ಹಂತದ ವೇಳಾಪಟ್ಟಿಯಲ್ಲಿ 8 ಡಬಲ್ ಹೆಡರ್ ಪಂದ್ಯಗಳಿವೆ. ಪಂಜಾಬ್ ಕಿಂಗ್ಸ್ ತಂಡವು ತನ್ನ ತವರಿನ ಪಂದ್ಯಗಳನ್ನು ನವಚಂಡೀಗಢ ಮತ್ತು ಧರ್ಮಶಾಲಾದಲ್ಲಿ ಆಡಲಿದೆ. ರಾಜಸ್ಥಾನ ರಾಯಲ್ಸ್ ತಂಡವು ತನ್ನ ತವರಿನ 4 ಪಂದ್ಯಗಳನ್ನು ಜೈಪುರದಲ್ಲಿ ಆಡಲಿದೆ. ಆರ್‌ಸಿಬಿ ತಂಡವು ಬೆಂಗಳೂರಿನಲ್ಲಿ ಮೂರು ಮತ್ತು ರಾಯಪುರದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಪ್ಲೇಆಫ್ ಪಂದ್ಯಗಳ ದಿನಾಂಕಗಳನ್ನ ಇನ್ನೂ ಮುಂದಿನ ಹಂತದಲ್ಲಿ ಪ್ರಕಟಿಸುವುದಾಗಿ ಐಪಿಎಲ್‌ ಆಡಳಿತ ಮಂಡಳಿ ತಿಳಿಸಿದೆ.

Share This Article