ನೂತನ ಸಂಸತ್ ಭವನದಲ್ಲಿ ಅನುಭವ ಮಂಟಪ ಕಲಾಕೃತಿ ಸ್ಥಾಪನೆ ಕರ್ನಾಟಕದ ಹೆಮ್ಮೆ: ಪ್ರಹ್ಲಾದ್ ಜೋಶಿ

Public TV
1 Min Read

ಬೆಂಗಳೂರು: 20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದಲ್ಲಿ ಬಸವಣ್ಣನವರ ಅನುಭವ ಮಂಟಪ ಕಲಾಕೃತಿಯನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೂತನ ಸಂಸತ್ ಭವನದಲ್ಲಿ ಸಂವಿಧಾನದ ಗ್ಯಾಲರಿ ನಿರ್ಮಿಸಲಾಗುತ್ತಿದ್ದು, 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪಕ್ಕೆ ಸಂಬಂಧಿಸಿದ ಹಸ್ತಪ್ರತಿ, ಕಲಾಕೃತಿ ಸೇರಿದಂತೆ ಲಭ್ಯ ಇರುವ ಅಗತ್ಯ ದೃಶ್ಯ ದಾಖಲೆಗಳನ್ನೂ ಪ್ರದರ್ಶಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು

ಈ ನಿಟ್ಟಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು, ಹಸ್ತಪ್ರತಿ ಹಾಗೂ ಕಲಾಕೃತಿ ಪೂರೈಸುವಂತೆ ಮನವಿ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಅನುಭವ ಪಡೆದವರು ಚರ್ಚಿಸಿ ಅನುಭವ ಹಂಚಿಕೊಳ್ಳುತ್ತಿದ್ದ, ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿ, ಜಗತ್ತಿನ ಮೊದಲ ಸಂಸತ್ ಎನಿಸಿಕೊಂಡಿರುವ ಅನುಭವ ಮಂಟಪದ ಕಲಾಕೃತಿ ನೂತನ ಸಂಸತ್ ಭವನದ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುವುದು. ಇದು ಸಮಸ್ತ ಕನ್ನಡಿಗರಿಗೆ ಗೌರವದ ವಿಷಯ ಎಂದು ಜೋಶಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಬೇಬಿಬೆಟ್ಟದ ಆ ಜಾಗ ಮೈಸೂರು ಅರಮನೆಗೆ ಸೇರಿದ್ದು: ಯದುವೀರ್

20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಸತ್ ಭವನ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಸವಣ್ಣನವರ ಅನುಭವ ಮಂಟಪ 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿತ್ತು ಎಂಬುದರ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಭಾಷಣಗಳಲ್ಲೂ ಪ್ರಸ್ತಾಪಿಸಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯವು ಈ ಕುರಿತಂತೆ ಈಗಾಗಲೇ ಮಾಹಿತಿ ಸಂಗ್ರಹಿಸಲು ಅಣಿಯಾಗಿದ್ದು, ಬಸವ ಅಧ್ಯಯನ ಪೀಠ ಹಾಗೂ ಹಿರಿಯ ಸಂಶೋಧಕರೊಂದಿಗೆ ಒಂದು ಸುತ್ತಿನ ಸಭೆ ನಡೆಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *