ಜಾಗತಿಕ AI ಶೃಂಗದಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು

1 Min Read

ನವದೆಹಲಿ: ಭಾರತ ಮಂಟಪದಲ್ಲಿ(Bharat Mandapam) ನಡೆಯುತ್ತಿರುವ ಜಾಗತಿಕ ಕೃತಕ ಬುದ್ದಿಮತ್ತೆ (AI) ಶೃಂಗಸಭೆ ವೇದಿಕೆಯ ಮೇಲೆ ಏರಿ ಯುವ ಕಾಂಗ್ರೆಸ್‌ (Yuva Congress) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಈ ಕಾರ್ಯಕ್ರಮ ವೀಕ್ಷಣೆಗೆಂದು ಆಗಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಸಭಾಂಗಣ ಪ್ರವೇಶಿಸಿದ ಬಳಿಕ ತಮ್ಮ ಶರ್ಟ್‌ ತೆಗೆದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್‌?

ಅಮೆರಿಕದ ವಿರುದ್ಧ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆ (Protest) ನಡೆಸಿದ ಯುವ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article