West Bengal Elections Voting Phase 2 | ಮಧ್ಯಾಹ್ನ 1 ಗಂಟೆಯ ವೇಳೆ ಶೇ.61.11 ರಷ್ಟು ಮತದಾನ

2 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal Election) ಎರಡನೇ ಹಂತದ ವಿಧಾನಸಭಾ ಚುನಾವಣೆ (Election) ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯ ವೇಳೆ ಶೇ. 61.11 ರಷ್ಟು ಮತದಾನವಾಗಿದೆ.

ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 65.77 ರಷ್ಟು ಮತದಾನ ದಾಖಲಾಗಿದೆ. ಗಮನಾರ್ಹವಾಗಿ, ಏಪ್ರಿಲ್ 23 ರಂದು ನಡೆದ ಮೊದಲ ಹಂತದ ಮತದಾನದ ವೇಳೆಯೂ ಮಧ್ಯಾಹ್ನ 1 ಗಂಟೆಗೆ ಇದೇ ರೀತಿಯ (ಶೇ. 60-62) ಹೆಚ್ಚಿನ ಪ್ರಮಾಣದ ಮತದಾನ ನಡೆದಿತ್ತು.

ಎರಡನೇ ಹಂತದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಭವಾನಿಪುರ ಸೇರಿದಂತೆ ಒಟ್ಟು 142 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಭವಾನಿಪುರ ಮತ್ತು ಹೂಗ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆಗಳು ನಡೆದಿವೆ. ಇದನ್ನೂ ಓದಿ: West Bengal Election| ಹಲವು ಮತಗಟ್ಟೆಗಳಲ್ಲಿ ಕಮಲದ ಬಟನ್‌ ಮೇಲೆ ಟೇಪ್‌ – ಮರುಮತದಾನಕ್ಕೆ ಬಿಜೆಪಿ ಆಗ್ರಹ

ಮತದಾನದ ವೇಳೆ ಅಕ್ರಮ ನಡೆದಿದೆ ಎಂಬ ಬಗ್ಗೆ ಸುಮಾರು 450ಕ್ಕೂ ಹೆಚ್ಚು ದೂರುಗಳು ಚುನಾವಣಾ ಆಯೋಗಕ್ಕೆ(Election Commission) ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಶ್ಚಿಮ ಬಂಗಾಳದ 7 ಜಿಲ್ಲೆಗಳ 142 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸುಮಾರು 3.22 ಕೋಟಿ ಮತದಾರರು ಇಂದು 1,448 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಈ ಹಂತದ 142 ಕ್ಷೇತ್ರಗಳಲ್ಲಿ ದಕ್ಷಿಣ ಬಂಗಾಳ ಮತ್ತು ಕೋಲ್ಕತ್ತಾದ ಟಿಎಂಸಿ ಭದ್ರಕೋಟೆಯಾಗಿದೆ. ಈ ಬಾರಿ ಈ ಕೋಟೆಯನ್ನು ಬೇಧಿಸಲು ಬಿಜೆಪಿ ಭಾರೀ ಪ್ರಯತ್ನ ನಡೆಸುತ್ತಿದೆ. ಇದನ್ನೂ ಓದಿ: ಬಂಗಾಳ ಚುನಾವಣೆಯಲ್ಲಿ ಹಿಂಸಾಚಾರ – ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ, ಟಿಎಂಸಿಯಿಂದ ಬೂತ್ ಧ್ವಂಸ

ಇಂದು ಸಂಜೆ 6:30ರ ನಂತರ ಎಕ್ಸಿಟ್ ಪೋಲ್ (Exit Poll) ಅಂಕಿಅಂಶಗಳು ಪ್ರಕಟವಾಗಲಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದ್ದು, ರಾಜ್ಯದ ಇತಿಹಾಸದಲ್ಲೇ ದಾಖಲೆಯ ಶೇ. 93.19ರಷ್ಟು ಮತದಾನವಾಗಿತ್ತು.ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Share This Article