ಯುನಿಕಾರ್ನ್‌ಗಳ ಮೌಲ್ಯ 25 ಲಕ್ಷ ಕೋಟಿಗೆ ಹೆಚ್ಚಳ – ಮೋದಿ

Public TV
1 Min Read

ನವದೆಹಲಿ: ಇದೇ ತಿಂಗಳ ಮೇ 5ರಂದು ದೇಶದಲ್ಲಿ ಯುನಿಕಾರ್ನ್‌ ಕಂಪನಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಅದರ ಒಟ್ಟು ಮೌಲ್ಯವೂ 25 ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ 89ನೇ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆಯಷ್ಟೇ ದೇಶ ನಮಗೆಲ್ಲರಿಗೂ ಸ್ಫೂರ್ತಿ ನೀಡುವಂತಹ ಸಾಧನೆ ಮಾಡಿದೆ. ಕ್ರಿಕೆಟ್ ಮೈದಾನದಲ್ಲಿ ಶತಕದ ಬಗ್ಗೆ ಕೇಳುತ್ತಲೇ ಇರುತ್ತೀರಿ. ಇನ್ನೊಂದು ಮೈದಾನದಲ್ಲಿ ಭಾರತ ಶತಕ ಬಾರಿಸಿದೆ. ಇದು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ನರೇಂದ್ರ ಮೋದಿ, ಅಮಿತ್ ಶಾ ಅವರದ್ದಲ್ಲ – ಓವೈಸಿ

ಯುನಿಕಾರ್ನ್ ಕಂಪನಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಒಟ್ಟು ಮೌಲ್ಯವು 330 ಶತಕೋಟಿ ಡಾಲರ್‌ ಅಂದರೆ 25 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

NARENDRA MODI

ನಮ್ಮ ಒಟ್ಟು ಯುನಿಕಾರ್ನ್‌ಗಳಲ್ಲಿ 44 ಕಳೆದ ವರ್ಷ ಮಾಡಲಾಗಿತ್ತು. ಈ ವರ್ಷ 3-4 ತಿಂಗಳಲ್ಲಿ ಇನ್ನೂ 14 ಯುನಿಕಾರ್ನ್‌ಗಳನ್ನು ತಯಾರಿಸಲಾಗಿದೆ. ನಮ್ಮ ಸ್ಟಾರ್ಟ್‌ ಅಪ್‌ಗಳು ಕೊರೊನಾ ಅವಧಿಯಲ್ಲಿಯೂ ಸಂಪತ್ತು ಮತ್ತು ಮೌಲ್ಯಗಳಿರುವುದನ್ನು ಮುಂದುವರಿಸಿದವು. ದೇಶದಲ್ಲಿ ಸ್ಟಾರ್ಟ್‌ ಅಪ್‌ಗಳಿಗೆ ಅನುಕೂಲಕರ ವಾತಾವರಣವಿದೆ. ದೊಡ್ಡ ಮಹಾನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳಲ್ಲೂ ಸ್ಟಾರ್ಟಪ್‌ಗಳು ರೂಪುಗೊಳ್ಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ತವ್ಯನಿರತ ಯೋಧ ಹುತಾತ್ಮ- ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಭಾರತೀಯ ಯುನಿಕಾರ್ನ್‌ಗಳ ಸರಾಸರಿ ವಾರ್ಷಿಕ ಬೆಳವಣಿಗೆಯ ದರವು US ಹಾಗೂ UK ಇತರ ದೇಶಗಳಿಗಿಂತ ಹೆಚ್ಚಾಗಿದೆ ಎಂದು ಗಮನ ಸೆಳೆದರು. ಇದೇ ವೇಳೆ ಸ್ವಚ್ಛತೆ ಕುರಿತು ತಿಳಿವಳಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *