ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ

1 Min Read

ಒಟ್ಟಾವಾ: ಭಾರತದ (India) ಪರವಾಗಿ ತೀಕ್ಷ್ಣ ಹೇಳಿಕೆಗಳು ಹಾಗೂ ಗಂಭೀರವಾದ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದ ಯೂಟ್ಯೂಬರ್​ ನ್ಯಾನ್ಸಿ ಗ್ರೆವಾಲ್​ (Nancy Grewal) ಅವರನ್ನು ಕೆನಡಾದಲ್ಲಿ (Canada) ಹತ್ಯೆ ಮಾಡಲಾಗಿದೆ.

ಮಂಗಳವಾರ ರಾತ್ರಿ ನ್ಯಾನ್ಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಹರಿತವಾದ ಆಯುಧಗಳಿಂದ ಅವರನ್ನು ಇರಿಯಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ, ಇಸ್ರೇಲ್‌, ಯುರೋಪ್‌ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿ ಬಂದ್‌: ಇರಾನ್‌

ನ್ಯಾನ್ಸಿ ಗ್ರೆವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀಕ್ಷ್ಣ ಹೇಳಿಕೆ, ಪೋಸ್ಟ್​ಗಳಿಂದ ಹೆಸರುವಾಸಿಯಾಗಿದ್ದರು. ಈವರೆಗೂ ಯಾವುದೇ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೇ? ಇಲ್ಲವೇ ಎಂಬುದನ್ನು ಪೊಲೀಸರು ಇನ್ನೂ ಮಾಹಿತಿ ನೀಡಿಲ್ಲ.

ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಮಯದಲ್ಲಿ ಮನೆಯ ಸುತ್ತಮುತ್ತ ಇದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ ದಾಳಿಕೋರನ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಸ್ಥಳೀಯ ಜನರ ಸಹಾಯವನ್ನೂ ಕೇಳಿದ್ದಾರೆ ಎಂದು ವರದಿಯಾಗಿದೆ.

ಈ ದಾಳಿಯ ಹಿಂದೆ ಉಗ್ರಗಾಮಿಗಳ ಕೈವಾಡ ಇರಬಹುದೆಂಬ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ನ್ಯಾನ್ಸಿ ಗ್ರೆವಾಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನಿ (Khalistan) ಚಟುವಟಿಕೆಗಳನ್ನು ಹೆಚ್ಚಾಗಿ ಟೀಕಿಸುತ್ತಿದ್ದರು. ಈ ಕಾರಣದಿಂದಾಗಿ ಕೆಲವರಿಂದ ವಿರೋಧವೂ ಎದುರಿಸಿದ್ದರೆಂಬ ಮಾಹಿತಿ ಇದೆ. ಇದನ್ನೂ ಓದಿ: ಇರಾನ್- ಇಸ್ರೇಲ್ ಯುದ್ಧ: 6 ದಿನದಲ್ಲಿ 23 ಸಾವಿರಕ್ಕೂ ಅಧಿಕ ವಿಮಾನಗಳು ಕ್ಯಾನ್ಸಲ್

Share This Article