ಫಲ ಕೊಡದ ಚಹರ್ ಚಮತ್ಕಾರ – ಟೀಂ ಇಂಡಿಯಾಗೆ ವೈಟ್‍ವಾಶ್‌ ಮುಖಭಂಗ

Public TV
2 Min Read

ಕೇಪ್‍ಟೌನ್: ಟೀಂ ಇಂಡಿಯಾ ವಿರುದ್ಧ ಇನ್ನೇನೂ ಸೋಲುವ ಹಂತದಲ್ಲಿದ್ದ ಪಂದ್ಯವನ್ನು ದಕ್ಷಿಣ ಆಫ್ರಿಕಾ ಬೌಲರ್‌ಗಳು ಅದ್ಭುತವಾದ ದಾಳಿಯ ಮೂಲಕ ಗೆಲ್ಲಿಸಿಕೊಟ್ಟು, ಏಕದಿನ ಸರಣಿಯಲ್ಲಿ ಭಾರತಕ್ಕೆ ವೈಟ್‍ವಾಶ್‌ ಮುಖಭಂಗವಾಗುವಂತೆ ಮಾಡಿದ್ದಾರೆ.

ಗೆಲ್ಲಲು 288 ರನ್ ಗುರಿ ಪಡೆದ ಟೀಂ ಇಂಡಿಯಾ ಕೊನೆ ಓವರ್ ವರೆಗೂ ಹೋರಾಡಿ ವಿರೋಚಿತ ಸೋಲು ಕಂಡಿದೆ. ಭಾರತದ ಪರ ಶಿಖರ್ ಧವನ್ 61 ರನ್ (73 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ವಿರಾಟ್ ಕೊಹ್ಲಿ 65 ರನ್ (84 ಎಸೆತ, 5 ಬೌಂಡರಿ) ಬಾರಿಸಿ 2ನೇ ವಿಕೆಟ್‍ಗೆ 98 ರನ್(110 ಎಸೆತ) ಜೊತೆಯಾಟವಾಡಿ ಔಟ್ ಆದರು. ನಂತರ ಪಂತ್ ಶೂನ್ಯ ಸುತ್ತಿದರೆ, ಶ್ರೇಯಸ್ ಅಯ್ಯರ್ 26 ರನ್ (34 ಎಸೆತ, 2 ಬೌಂಡರಿ) ಮತ್ತು ಸೂರ್ಯಕುಮಾರ್ ಯಾದವ್ 39 ರನ್ (32 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: ಅರ್ಧಶತಕ ಸಿಡಿಸಿ ಮಗಳಿಗೆ ಸಮರ್ಪಿಸಿದ ಕೊಹ್ಲಿ

35.5 ಓವರ್‌ಗಳಲ್ಲಿ 210 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲುವ ಹಂತದಲ್ಲಿದ್ದ ಪಂದ್ಯವನ್ನು ದೀಪಕ್ ಚಹರ್ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ಗೆಲುವಿನ ದಡ ಸೇರಿಸಬೇಕೆನ್ನುವಷ್ಟರಲ್ಲಿ 54 ರನ್ (34 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಆದರೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ರನ್ ಅವಶ್ಯಕತೆ ಇತ್ತು ಪ್ರಸಿದ್ಧ್ ಕೃಷ್ಣ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ 1 ರನ್ ಬಾರಿಸಿದರು. ನಂತರ 5 ಎಸೆತಗಳಲ್ಲಿ 5 ರನ್ ಬೇಕಿತ್ತು. ಎರಡನೇ ಎಸೆತವನ್ನು ಬಲವಾಗಿ ಬಾರಿಸಲು ಯತ್ನಿಸಿದ ಯಜುವೇಂದ್ರ ಚಹಲ್ ಕ್ಯಾಚ್ ನೀಡಿ ಭಾರತದ ಗೆಲುವಿನ ಆಸೆಗೆ ತಣ್ಣಿರೇರಚಿದರು. ಅಂತಿಮವಾಗಿ ಟೀಂ ಇಂಡಿಯಾ 49.2 ಓವರ್‌ಗಳಲ್ಲಿ 283 ರನ್‍ಗಳಿಗೆ ಸರ್ವಪತನ ಕಂಡು 4 ರನ್‍ಗಳ ವಿರೋಚಿತ ಸೋಲು ಕಂಡಿತು. ಈ ಮೂಲಕ ಆಫ್ರಿಕಾ 3-0 ಅಂತರದಲ್ಲಿ ಸರಣಿ ಗೆದ್ದಿದೆ. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

ಡಿ ಕಾಕ್ ಶತಕದ ಸಂಭ್ರಮ
ಈ ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಕ್ವಿಂಟನ್ ಡಿ ಕಾಕ್ ಆರಂಭದಿಂದಲೇ ಭರ್ಜರಿ ಆಟಕ್ಕೆ ಮೊರೆ ಹೋದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಜವಾಬ್ದಾರಿಯುತ ಬ್ಯಾಟಿಂಗ್ ಡಿ ಕಾಕ್ 124 ರನ್ (130 ಎಸೆತ, 12 ಬೌಂಡರಿ, 2 ಸಿಕ್ಸ್) ಸಿಡಿಸಿ ಭಾರತದ ಬೌಲರ್‌ಗಳಿಗೆ ಕಾಡಿದರು.

ಡಿ.ಕಾಕ್‍ಗೆ ಉತ್ತಮ ಸಾಥ್ ನೀಡಿದ ವ್ಯಾನ್ ಡೆರ್ ಡಸ್ಸೆನ್ 52 ರನ್ (59 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು. ಇವರನ್ನು ಹೊರತು ಪಡಿಸಿ ಡೇವಿಡ್ ಮಿಲ್ಲರ್ 39 ರನ್ (38 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿದರು. ಅಂತಿಮವಾಗಿ 49.5 ಓವರ್‌ಗಳಲ್ಲಿ 287 ರನ್‍ಗಳಿಗೆ ಆಫ್ರಿಕಾ ಆಲೌಟ್ ಆಯಿತು.

ಟೀಂ ಇಂಡಿಯಾ ಪರ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಕಿತ್ತು ಮಿಂಚಿದರು, ಬುಮ್ರಾ ಮತ್ತು ದೀಪಕ್ ಚಹರ್ ತಲಾ 2 ವಿಕೆಟ್ ಪಡೆದರೆ, ಚಹಲ್ 1 ವಿಕೆಟ್ ಕಿತ್ತರು.

Share This Article
Leave a Comment

Leave a Reply

Your email address will not be published. Required fields are marked *