ಚೀನಾ, ಪಾಕ್‌, ಬಾಂಗ್ಲಾಗೆ ಹೋಲಿಸಿದ್ರೆ ಭಾರತಕ್ಕೆ ಈಗ ಕಡಿಮೆ ಸುಂಕ

2 Min Read

ನವದೆಹಲಿ: ಯುರೋಪಿಯನ್‌ ಒಕ್ಕೂಟದ (European Union) ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ (USA) ಭಾರತದ (India) ಮೇಲೆ ವಿಧಿಸಿದ್ದ ಸುಂಕವನ್ನು ಕಡಿತ ಮಾಡಿದೆ.

- Advertisement -

ಟ್ರಂಪ್‌ (Donald Trump) ಅಧಿಕಾರಕ್ಕೆ ಏರಿದ ಬಳಿಕ ಪ್ರತಿ ತೆರಿಗೆ, ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡ ಸೇರಿದಂತೆ ಭಾರತದ ವಸ್ತುಗಳಿಗೆ ಅಮೆರಿಕ 50% ಸುಂಕವನ್ನು ವಿಧಿಸಿತ್ತು. ಈ ಟ್ರಂಪ್‌ ಈಗ 18% ಮಾತ್ರ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ.

- Advertisement -

ಟ್ರಂಪ್‌ ನಿರ್ಧಾರದಿಂದ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾಕ್ಕೆ ಹೋಲಿಸಿದರೆ ಭಾರತದ ಮೇಲೆ ಕಡಿಮೆ ತೆರಿಗೆ ಬಿದ್ದಿದೆ. ಇದನ್ನೂ ಓದಿ: ಭಾರತದ ಮೇಲಿನ ಸುಂಕ 18% ಗೆ ಇಳಿಕೆ – 500 ಶತಕೋಟಿ ಡಾಲರ್‌ ಒಪ್ಪಂದ ಘೋಷಿಸಿದ ಟ್ರಂಪ್‌

- Advertisement -

ಹೆಚ್ಚಿನ ಸುಂಕ ಯಾವ ದೇಶಕ್ಕೆ
ಚೀನಾ: 37%
ಬ್ರೆಜಿಲ್: 50%
ದಕ್ಷಿಣ ಆಫ್ರಿಕಾ: 30%
ಮ್ಯಾನ್ಮಾರ್: 40%
ಲಾವೋಸ್: 40%

- Advertisement -


ಕಡಿಮೆ ಸುಂಕ ಯಾವ ದೇಶಕ್ಕೆ?
ಯುರೋಪಿಯನ್ ಯೂನಿಯನ್: 15%
ಜಪಾನ್: 15%
ದಕ್ಷಿಣ ಕೊರಿಯಾ: 15%
ಸ್ವಿಟ್ಜರ್ಲೆಂಡ್: 15%
ಯುನೈಟೆಡ್ ಕಿಂಗ್‌ಡಮ್: 10%

ಆಗ್ನೇಯ ಏಷ್ಯಾದಲ್ಲಿ ಯಾರಿಗೆ ಎಷ್ಟು?
ಬಾಂಗ್ಲಾದೇಶ: 20%
ವಿಯೆಟ್ನಾಂ: 20%
ಮಲೇಷ್ಯಾ: 19%
ಕಾಂಬೋಡಿಯಾ: 19%
ಥೈಲ್ಯಾಂಡ್: 19%
ಪಾಕಿಸ್ತಾನ: 19%

ಟ್ರಂಪ್ ಹಾಕಿದ್ದ ಸುಂಕಗಳು ಯಾವುದು?
10% ಮೂಲ ಸುಂಕ: ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ.
15% ಪ್ರತಿ ಸುಂಕ: ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.
25% ದಂಡ ಸುಂಕ: ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.

Share This Article