ಓಪನರ್ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯುತ್ತೇನೆ: ಕೆಎಲ್ ರಾಹುಲ್

Public TV
2 Min Read

ಕೇಪ್‍ಟೌನ್: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಓಪನರ್ ಬ್ಯಾಟ್ಸ್​ಮನ್ ಆಗಿ ನಾನೇ ಕಣಕ್ಕೆ ಇಳಿಯುವುದಾಗಿ ಟೀಂ ಇಂಡಿಯಾ ತಂಡದ ನಾಯಕ ಕೆ.ಎಲ್. ರಾಹುಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡದ ಒಳಿತಿಗಾಗಿ ನಾನು ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ್ದೇನೆ. ಆದರೆ ರೋಹಿತ್ ಶರ್ಮಾ ಇಲ್ಲದ ಕಾರಣ ಈ ಬಾರಿ ನಾನೇ ಓಪನರ್ ಆಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದರು.

ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಪ್ರಥಮ ಬಾರಿಗೆ ಮುನ್ನಡೆಸಿದ್ದೆ. ಆದರೆ ನಿರಿಕ್ಷಿತ ಮಟ್ಟದಲ್ಲಿ ತಂಡ ಫಲಿತಾಂಶ ಕಾಣಲಿಲ್ಲ. ಇದರಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ ಮತ್ತು ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದರು.

ತಂಡವನ್ನು ಮುನ್ನಡೆಸುವುದು ಎಂದರೆ ಎಲ್ಲರಿಗೂ ವಿಶೇಷ ಜವಾಬ್ದಾರಿಯಾಗಿದೆ. ಅದಕ್ಕೆ ನಾನೇನು ಭಿನ್ನನಲ್ಲ. ನನಗೆ ಟೆಸ್ಟ್ ನಾಯಕನಾಗಿ ಅವಕಾಶ ನೀಡಿದರೆ ಅದು ದೊಡ್ಡ ಜವಾಬ್ದಾರಿಯಾಗಿದೆ. ಅದನ್ನು ಮುನ್ನಡೆಸುತ್ತೇನೆ. ಆದರೆ ನಾನು ಈಗ ನಡೆಯುತ್ತಿರುವ ಪಂದ್ಯಕ್ಕಷ್ಟೇ ಹೆಚ್ಚು ಗಮನವನ್ನು ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ: ಗೌತಮ್ ಗಂಭೀರ್

ನಾಳೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಏಕದಿನ ಪಂದ್ಯ ಪ್ರಾರಂಭವಾಗಲಿದೆ. ಏಕದಿನ ಸರಣಿಯ ನಾಯಕ ರೋಹಿತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದ್ದಾರೆ. ರೋಹಿತ್ ಅನುಪಸ್ಥಿತಿಯಿಂದ ತಂಡವನ್ನು ಮುನ್ನಡೆಸಲು ಕೆಎಲ್ ರಾಹುಲ್ ತಂಡದ ನಾಯಕರಾಗಿ ಸಿದ್ಧರಾಗಿದ್ದಾರೆ. ಈ ಸರಣಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ರಾಹುಲ್ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಟೆಸ್ಟ್ ನಾಯಕತ್ವದ ಹೊಣೆ ವಹಿಸಿದರೆ ಬೇಡ ಎನ್ನುವುದಿಲ್ಲ: ಜಸ್‍ಪ್ರೀತ್ ಬೂಮ್ರಾ

ಟೀಂ ಇಂಡಿಯಾ ಆಟಗಾರರು: ಕೆಎಲ್ ರಾಹುಲ್ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್, ಇಶಾನ್ ಕಿಶನ್, ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

Share This Article
Leave a Comment

Leave a Reply

Your email address will not be published. Required fields are marked *