ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ವಿಕ್ಟರಿ ಬಾರಿಸಿ, ಜಯ ಸಾಧಿಸಿದ ನಟ, ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ಗೆ (TVK Vijay) ಸ್ಯಾಂಡಲ್‌ವುಡ್ ನಟ ಶಿವರಾಜಕುಮಾರ್ (Actor Shivajar Kumar) ಶುಭಾಶಯ ತಿಳಿಸಿದ್ದಾರೆ.
ಶಿವಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ನಟ ವಿಜಯ್‌ಗೆ ವಿಶ್ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನೀವು ಅರ್ಹವಾದ ಗೆಲುವುನ್ನು ಸಾಧಿಸಿದ್ದೀರಿ. ಟೀಕಿಸುತ್ತಿರುವ ಸಮಯದಲ್ಲಿ ಮೌನವಾಗಿದ್ದು, ನಿಮ್ಮ ಕೆಲಸಗಳ ಮೂಲಕ ಉತ್ತರಿಸಿದ್ದೀರಿ. ಇದೇ ನಿಜವಾದ ಗೆಲುವು. ಒಮ್ಮೆ ಮಾಧ್ಯಮಗಳ ಜೊತೆ ಮಾತನಾಡುವಾಗ ನಾನು ತಮಾಷೆಯಾಗಿ, ಟಿವಿಕೆ ಅಂದ್ರೆ Try Vijay as King ಅಂದಿದ್ದೆ. ಇಂದು ನಿಜವಾಗಿಯೂ ನೀವು ರಾಜನಂತೆ ಎದ್ದು ನಿಂತಿದ್ದೀರಿ. ಟಿವಿಕೆ ಮೂಲಕ ತಮಿಳುನಾಡಿನ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ನೆರವೇರಿಸುವಂತಾಗಲಿ, ಸದಾ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದ್ದಾರೆ.ಇದನ್ನೂ ಓದಿ: ಒಂದೇ ಮತದಿಂದ ಸೋತ ತಮಿಳುನಾಡು ಸಚಿವ – ಟಿವಿಕೆ ಅಭ್ಯರ್ಥಿಗೆ ರೋಚಕ ಜಯ
A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK – Stands for Try Vijay As King’ and today you’ve stood tall like a King. May you fullfil…
— DrShivaRajkumar (@NimmaShivanna) May 5, 2026
234 ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಗದ್ದುಗೆ ಏರಲು 118 ಬಹುಮತಗಳ ಅವಶ್ಯಕತೆಯಿದೆ. ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅವಶ್ಯಕತೆಯಿದೆ.
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.ಇದನ್ನೂ ಓದಿ:Vijay Blockbuster Debut `ವಿಜಯ’ದ ಹಿಂದಿದೆ 17 ವರ್ಷದ ರಹಸ್ಯ

