ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

Public TV
1 Min Read

– ನಮ್ಮ ಇಡೀ ಊರಲ್ಲಿ ಲಾಯರ್ ಆಗಿದ್ದು ನಾನೊಬ್ಬನೇ

ಬೆಂಗಳೂರು: ಶತಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದಾರೆ. ನಮ್ಮ ಇಡೀ ಊರಿನಲ್ಲಿ ಲಾಯರ್ (Lawyer) ಆದವನು ನಾನು ಒಬ್ಬನೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಶಿಕ್ಷಣದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಕಾಳಿದಾಸ ಹೆಲ್ತ್ ಆಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಸಂತ ನಗರದ ದೇವರಾಜ್ ಅರಸ ಭವನದಲ್ಲಿ ನಡೆದ ಪ್ರೇರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಸಿಎಂ, ನಮ್ಮ ಊರಲ್ಲಿ ಪದವೀಧರರು ಇದ್ದರು. ಆದರೆ ಲಾಯರ್ ಆಗಿದ್ದು ನಾನೇ. ನಮ್ಮ ಅಪ್ಪ ನಮ್ಮೂರು ಶಾನುಭೋಗರ ಮಾತು ಕೇಳುತ್ತಿದ್ದರು. ನನಗೆ ಎಂಎಸ್‌ಸಿ ಸೀಟು ಸಿಗಲಿಲ್ಲ. ಆಮೇಲೆ ವ್ಯವಸಾಯ ಮಾಡುತ್ತಿದ್ದೆ. ಅದಾದ ಬಳಿಕ ಲಾ ಓದೋಕೆ ಹೋಗಿದ್ದೆ ಎಂದು ತಿಳಿಸಿದರು.

ನಮ್ಮ ಅಪ್ಪನಿಗೆ ನಾನು ಲಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಅವರು ಶಾನುಭೋಗರ ಹತ್ತಿರ ಹೋಗಿ ಕೇಳಿದ್ದರು. ಆಗ ಶಾನುಭೋಗರು ಕುರುಬರು ಲಾಯರ್ ಕೆಲಸ ಮಾಡೋಕೆ ಆಗುತ್ತಾ? ಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿ ನಮ್ಮ ಅಪ್ಪ ನನಗೆ ಲಾಯರ್ ಮಾಡಬೇಡ ಎಂದು ಹೇಳಿದ್ರು. ಆದರೂ ಕೂಡಾ ನಾನು ಲಾಯರ್ ಓದಿದೆ. ಬಳಿಕ ಶಾನುಭೋಗರ ಆಸ್ತಿ ವಿಚಾರಕ್ಕೆ ನಾನೇ ಲಾಯರ್ ಆದೆ. ಆಗ ಶಾನುಭೋಗರು ಏನು ಮಾತಾಡದೇ ಸುಮ್ಮನೆ ಆದರು ಎಂದು ಸಿಎಂ ತಮ್ಮ ಲಾ ಜೀವನದ ಇತಿಹಾಸ ಬಿಚ್ಚಿಟ್ಟರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

ನಾನು ಎವರೇಜ್ ಸ್ಟೂಡೆಂಟ್. ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸ್, ಪಿಯುಸಿ ಬಂದ ಮೇಲೆ ಸೆಕೆಂಡ್ ಕ್ಲಾಸ್. ಡಿಗ್ರಿ ಬಂದ ಮೇಲೆ ಎವರೇಜ್ ಸ್ಟೂಡೆಂಟ್ ಆಗಿದ್ದೆ. ಆದರು ನಾನು ಇವತ್ತು ಸಿಎಂ ಆಗಿದ್ದೇನೆ. ಜೀವನದಲ್ಲಿ ಶ್ರಮ ಮುಖ್ಯ ಎಂದು ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಕರ್ನಾಟಕಕ್ಕೆ ಗ್ರಹಣ- ಬಿಜೆಪಿ ವ್ಯಂಗ್ಯ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್