ಮೈಸೂರು: ಬೆಂಗಳೂರು – ಮೈಸೂರು (Bengaluru-Mysuru) ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದು ನಾನು, ಮಹದೇವಪ್ಪ. ಈಗ ಯಾರೋ ಬಂದು ಅದರ ಕ್ರೆಡಿಟ್ ಪಡೆಯಲು ಓಡಾಡುತ್ತಾರೆ. ಆತನ ಹೆಸರು ಕೂಡ ನಾನು ಹೇಳಲ್ಲ ಎಂದು ಸಿದ್ದರಾಮಯ್ಯ (Siddaramaiah) ಪರೋಕ್ಷವಾಗಿ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆದ ಯುವ ಕಾಂಗ್ರೆಸ್ (Yuva Congress) ಸಮಾವೇಶದಲ್ಲಿ ಮಾತನಾಡಿದ ಅವರು, ಮೈಸೂರು ಅಭಿವೃದ್ಧಿ ಮಾಡಿದ್ದು ನಾವೇ ಹೊರತು ಬಿಜೆಪಿ (BJP) ಅಲ್ಲ. ಬಿಜೆಪಿ ಅಧಿಕಾರದಲ್ಲಿ ದುಡ್ಡು ಹೊಡೆಯಲು ದುಡ್ಡಿಲ್ಲದೆ ಕೆಲಸ ಮಾಡಿಸಿದರು. ಆದರೆ ಬಿಲ್ ಕೊಟ್ಟಿದ್ದು ನಾವು. ಬಿಜೆಪಿಯವರು ಈಗ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಜೋಕಾಲಿ ಆಡುವ ವೇಳೆ ಚೂಡಿದಾರ್ ವೇಲ್ ಸಿಲುಕಿ 12ರ ಬಾಲಕಿ ಸಾವು
ಸಂವಿಧಾನದಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದ ತೆಗೆದು ಹಾಕಿ ಎಂದು ಆರ್‌ಎಸ್‌ಎಸ್ (RSS) ನಾಯಕರು ಭಾಷಣ ಮಾಡಿದ್ದಾರೆ. ಆರ್‌ಎಸ್‌ಎಸ್‌ನವರು ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಬಿಜೆಪಿಗೆ ದೇಶಭಕ್ತಿ ಮಾತಾಡಲು ಯಾವ ನೈತಿಕ ಹಕ್ಕಿದೆ? ಬಿಜೆಪಿ, ಆರ್‌ಎಸ್‌ಎಸ್‌ನವರು ಮಾತ್ರ ದೇಶಭಕ್ತರಾ? ಮೋದಿ ಹಾದಿಯಾಗಿ ಎಲ್ಲರೂ ಭಾರೀ ಭಾಷಣದಲ್ಲಿ ಮಾತ್ರ ಸಬ್ ಕಾ ಸಾಥ್ ಅಂತಾರೆ. ಆದರೆ ಅವರ ನಡೆ ಅದಕ್ಕೆ ವಿರೋಧ ಎಂದು ದೂರಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದ ಸಿಎಂ ಪತ್ನಿ, ಸೊಸೆ
ಒಬ್ಬ ಮುಸ್ಲಿಂ ಬಿಜೆಪಿ ಸಂಸದನನ್ನು ತೋರಿಸಿ. ಒಬ್ಬನೇ ಒಬ್ಬ ಮುಸ್ಲಿಮರನ್ನು ಬಿಜೆಪಿ ಅವರು ಸಂಸದರಾಗಿ ಮಾಡಿಲ್ಲ. ಅಂಬೇಡ್ಕರ್ ಅವರನ್ನು ಸಾರ್ವಕರ್ ಮತ್ತು ಕಮ್ಯೂನಿಸ್ಟರು ಚುನಾವಣೆಯಲ್ಲಿ ಸೋಲಿಸಿದ್ದರು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿಸಿಲ್ಲ ಎಂದು ತಿರುಗೇಟು ನೀಡಿದರು.