ಮಾಜಿ ಪ್ರೇಯಸಿಯಿಂದ ಬ್ಲ್ಯಾಕ್‌ಮೇಲ್- ಟ್ರಾಫಿಕ್ ಜಾಮ್‌ನಲ್ಲಿ ಪತ್ನಿಯನ್ನು ತೊರೆದು ಪತಿ ಪರಾರಿ

Public TV
2 Min Read

ಬೆಂಗಳೂರು: ಟ್ರಾಫಿಕ್ ಜಾಮ್‌ನಲ್ಲಿ (Traffic Jam) ನವ ವಿವಾಹಿತ ವರ ತನ್ನ ಪತ್ನಿಯನ್ನು ಬಿಟ್ಟು ಓಡಿ ಹೋದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಈ ಘಟನೆ ಬೆಂಗಳೂರಿನ ಮಹದೇವಪುರದ (Mahadevapura) ಟೆಕ್ ಕಾರಿಡಾರ್‌ನಲ್ಲಿ ನಡೆದಿದ್ದು, ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ಮೂಲದ ವರ ವಿಜಯ್ ಜಾರ್ಜ್ (Vijay George) (ಹೆಸರು ಬದಲಾಯಿಸಲಾಗಿದೆ) ಫೆಬ್ರವರಿ 16ರಂದು ಟೆಕ್ ಕಾರಿಡಾರ್‌ನ ಟ್ರಾಫಿಕ್ ಜಾಮ್‌ನಲ್ಲಿ ಕಾರ್ ಸಿಲುಕಿಕೊಂಡ ಸಂದರ್ಭ, ಕಾರಿನ ಬಾಗಿಲು ತೆರೆದು ಪತ್ನಿಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಇದರಿಂದ ಗಾಬರಿಗೊಂಡ ಪತ್ನಿ ತಾನೂ ಕಾರಿನಿಂದ ಇಳಿದು ಅವನ ಹಿಂದೆ ಓಡಿದ್ದಾಳೆ. ಆದರೆ ಆತ ಅವಳ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

ವಿಜಯ್ ಜಾರ್ಜ್ ಅವರ ತಂದೆ ಕರ್ನಾಟಕ (Karnataka) ಮತ್ತು ಗೋವಾದಲ್ಲಿ (Goa) ಮ್ಯಾನ್ ಪವರ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಈ ವಿಷಯವಾಗಿ ವಿಜಯ್ ತನ್ನ ತಂದೆಗೆ ಸಹಾಯ ಮಾಡುತ್ತಿದ್ದ. ಗೋವಾದಲ್ಲಿದ್ದಾಗ ತಮ್ಮ ಕಂಪೆನಿಯ ಕಾರ್ ಚಾಲಕನ ಪತ್ನಿಯ ಜೊತೆ ವಿಜಯ್ ಜಾರ್ಜ್ ಅಕ್ರಮ ಸಂಬಂಧ (Illicit Realtionship) ಹೊಂದಿದ್ದ. ಎರಡು ಮಕ್ಕಳ ತಾಯಿಯಾಗಿದ್ದ ಆ ಮಹಿಳೆ ಅದೇ ಕಂಪನಿಯಲ್ಲಿ ಕ್ಲರ್ಕ್ (Clerk) ಆಗಿ ಕೆಲಸ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

ತಾಯಿಗೆ ವಿಷಯ ತಿಳಿದ ಬಳಿಕ ಜಾರ್ಜ್  ತಮ್ಮ ಸಂಬಂಧವನ್ನು ಕೊನೆಗೊಳಿಸುವುದಾಗಿ ಹೇಳಿದ್ದ. ಆದರೂ ಜಾರ್ಜ್ ಕದ್ದುಮುಚ್ಚಿ ಮಹಿಳೆಯನ್ನು ಭೇಟಿಯಾಗುತ್ತಿದ್ದ. ಈ ಸಂಬಂಧವನ್ನು ತಡೆಯಲು ಜಾರ್ಜ್ ಕುಟುಂಬವು ಬೇರೆ ಯುವತಿಯೊಡನೆ ಮದುವೆ ನಿಶ್ಚಯಿಸಿದರು. ಮದುವೆಗೆ ಮೊದಲೇ ವಿಜಯ್ ತಮ್ಮ ಪ್ರೇಮದ ಬಗ್ಗೆ ಯುವತಿಯೊಡನೆ ಹೇಳಿಕೊಂಡಿದ್ದ. ಅಲ್ಲದೇ ಆಕೆಯ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಯುವತಿ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇದನ್ನೂ ಓದಿ: LACಯಲ್ಲಿ ಸಂಘರ್ಷ, ಭಾರತದಲ್ಲಿ ಉಗ್ರ ದಾಳಿ- ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ

 

ಆದರೆ ವಿಜಯ್ ಜಾರ್ಜ್ ನ ಮಾಜಿ ಪ್ರೇಮಿ ಅವರಿಬ್ಬರ ಖಾಸಗಿ ಕ್ಷಣಗಳ ವೀಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ವಿಜಯ್ ಅವರಿಗೆ ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿದ್ದರು. ಮದುವೆಯ ನಂತರ ತನ್ನ ಪತ್ನಿಯೊಡನೆ ವಿಜಯ್ ತನ್ನ ಮಾಜಿ ಪ್ರೇಮಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆಂದು ಹೇಳಿಕೊಂಡಿದ್ದ. ಇದಕ್ಕೆ ಪತ್ನಿ ಹಾಗೂ ಆಕೆಯ ತಂದೆ ಆತನ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಳು. ಇದನ್ನೂ ಓದಿ: ಮೊದಲು ನಿಮ್ಮ ದೇಶವನ್ನು ನೋಡಿಕೊಳ್ಳಿ – ಪಾಕಿಸ್ತಾನಕ್ಕೆ ಭಾರತ ವಾರ್ನಿಂಗ್

ಭರವಸೆಯ ಹೊರತಾಗಿಯೂ, ಮದುವೆಯ ಮರುದಿನ ದಂಪತಿ ಚರ್ಚ್‌ (Church)  ಭೇಟಿ ನೀಡಿ ಹಿಂದಿರುಗುವ ವೇಳೆ ಮಹಿಳೆಯ ಬ್ಲ್ಯಾಕ್‌ಮೇಲ್‌ಗೆ, ಟ್ರಾಫಿಕ್ ಜಾಮ್‌ನಲ್ಲಿ ವಿಜಯ್ ಜಾರ್ಜ್ ಓಡಿಹೋಗಿದ್ದಾನೆ ಎಂದು ಆತನ ಪತ್ನಿ ತಿಳಿಸಿದ್ದಾಳೆ.

ಈ ಕುರಿತು ಎರಡು ವಾರಗಳಿಗೂ ಹೆಚ್ಚು ಕಾಲ ವಿಜಯ್ ಜಾರ್ಜ್ ಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಾರ್ಚ್ 5ರಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ & ವೈಟ್ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್

Share This Article
Leave a Comment

Leave a Reply

Your email address will not be published. Required fields are marked *