20 ಸಿಸಿ ಕ್ಯಾಮೆರಾ ನಿಷ್ಕ್ರಿಯ, 7 ನಾಪತ್ತೆ – ಪೊಲೀಸರಿಗೆ ತಲೆನೋವಾದ ಹುಬ್ಬಳ್ಳಿ ಪುಂಡರ ಪತ್ತೆ ಕಾರ್ಯ

Public TV
1 Min Read

ಹುಬ್ಬಳ್ಳಿ: ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸುಮಾರು 100 ಗಲಭೆಕೋರರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ ಪೊಲೀಸರು ಪೇಚಿಗೆ ಸಿಲುಕಿದ್ದಾರೆ.

ಹಿಂಸಾಚಾರ ನಡೆದ ಪ್ರದೇಶದಲ್ಲಿ ಆರೋಪಿಗಳನ್ನು ಪೊಲೀಸರು ಸಿಸಿಟಿವಿ ಫೂಟೇಜ್ ಸಹಾಯದಿಂದ ಗುರುತಿಸಿ ಬಂಧಿಸುವ ಪ್ಲಾನ್ ಮಾಡಿದ್ದರು. ಆದರೆ ಅದೇ ಸಿಸಿಟಿವಿಗಳು ಈಗ ಕೈಕೊಟ್ಟಿವೆ. ಇದನ್ನೂ ಓದಿ:  ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

HBL_ POLICE 5

ಹಳೇ ಹುಬ್ಬಳಿಯ ಸುತ್ತಮುತ್ತ ಅಳವಡಿಸಲಾಗಿದ್ದ 48 ಕ್ಯಾಮೆರಾಗಳ ಪೈಕಿ ಕೇವಲ 21 ಕ್ಯಾಮೆರಾಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲೂ 7 ಕ್ಯಾಮೆರಾಗಳು ನಾಪತ್ತೆಯಾಗಿದ್ದು, 20 ಕ್ಯಾಮೆರಾಗಳು ನಿಷ್ಕ್ರಿಯಗೊಂಡಿವೆ. ಇದು ಪೊಲೀಸರಿಗೆ ಬಹು ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ಹನುಮಜಯಂತಿ ವೇಳೆ ಹಿಂಸಾಚಾರ – 4 ರಾಜ್ಯಗಳ 140 ಪುಂಡರು ಅರೆಸ್ಟ್

hbl (2)

ಹುಬ್ಬಳ್ಳಿ ಹಿಂಸಾಚಾರದಲ್ಲಿ ಸುಮಾರು 2,000 ಜನರು ಪಾಲ್ಗೊಂಡಿದ್ದಾಗಿ ಪೊಲೀಸರು ಅಂದಾಜಿಸಿದ್ದು, ಈ ಪೈಕಿ 100 ಮಂದಿಯನ್ನು ಮಾತ್ರವೇ ಸದ್ಯ ಬಂಧಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಹೊಣೆಯನ್ನು ವರ್ಟಿಕ್ಸ್ ಏಜೆನ್ಸಿ ಹೊತ್ತಿದ್ದು, ಅವರ ನಿರ್ಲಕ್ಷ್ಯದಿಂದಾಗಿ ಪೊಲೀಸರು ಇದೀಗ ಸಾಕ್ಷ್ಯಾಧಾರಗಳಿಲ್ಲದೇ ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *