ಹುಬ್ಬಳ್ಳಿ ಗಲಾಟೆ ಮೊದಲೇ ಗೊತ್ತಿತ್ತು: ಭರತ್ ಶೆಟ್ಟಿ ಆಡಿಯೋ ವೈರಲ್

Public TV
2 Min Read

ಬೆಂಗಳೂರು: ಹುಬ್ಬಳ್ಳಿ ಗಲಾಟೆ ಮೊದಲೇ ಗೊತ್ತಿತ್ತು ಎಂದು ಹಿಂದೂ ಮುಖಂಡ ಭರತ್ ಶೆಟ್ಟಿ ಅವರು ಹುಬ್ಬಳ್ಳಿ ಗಲಾಟೆ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಇದೀಗ ಆಗುತ್ತಿದೆ.

ಸ್ನೇಹ ಸಮ್ಮೇಳನದ ನೇತೃತ್ವವನ್ನು ವಹಿಸಿದ್ದ ಭರತ್ ಶೆಟ್ಟಿ ಅವರ ಸ್ಪೋಟಕ ಆಡಿಯೋವೊಂದು ಬಹಿರಂಗವಾಗಿದ್ದು, ಈ ಆಡಿಯೋದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹುಬ್ಬಳ್ಳಿ ಗಲಾಟೆಗಾಗಿಯೇ ಮಾಡಿರುವುದಾಗಿ ಹೇಳಿದ್ದಾರೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆ ಮಧ್ಯೆ ಈಗ ವೈಮನಸ್ಸು ಮೂಡಿದ್ದು, ಹುಬ್ಬಳ್ಳಿ ಗಲಾಟೆ ಮೊದಲೇ ಹೇಗೆ ಗೊತ್ತಾಗಲು ಸಾಧ್ಯ? ಇದು ಪೂರ್ವ ನಿಯೋಜಿತ ಕೃತ್ಯನಾ ಎಂದು ಕೆಲ ಹಿಂದೂ ಸಂಘಟನೆ ಸದಸ್ಯರು ಪ್ರಶ್ನಿಸಿದ್ದಾರೆ.

HBL_ POLICE 5

ಈ ಬಗ್ಗೆ ರಾಷ್ಟ್ರ ರಕ್ಷಣಾ ವೇದಿಕೆಯ ಪುನೀತ್ ಕೆರೆಹಳ್ಳಿ ಮಾತನಾಡಿ, ಈ ಘಟನೆಯಯನ್ನು ಗಮನಿಸಿದರೆ ಹಿಂದೂ ಸಂಘಟನೆಯನ್ನು, ಕಾರ್ಯಕರ್ತರನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಯೋಚನೆ ಬರುತ್ತಿದೆ. ಸ್ನೇಹ ಸಮ್ಮಿಲನ ಏಕಾಏಕಿ ನಡೆದಿದೆ? ಇದು ಹಿಂದೂ ಸಂಘಟನೆಯ ದಿಕ್ಕು ತಪ್ಪಿಸಿದೆ. ಭರತ್ ಶೆಟ್ಟಿಗೆ ನಿಜವಾಗಿಯೂ ಇದರ ಬಗ್ಗೆ ಮಾಹಿತಿಯಿತ್ತಾ ಎನ್ನುವುದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡುತ್ತೇವೆ ಎಂದು ತಿಳಿಸಿದರು.

ಇತ್ತಿಚಿನ ದಿನಗಳಲ್ಲಿ ಏಕಾಏಕಾಯಾಗಿ ನಡೆಯುತ್ತಿರುವ ಬೆಳವಣಿಗೆಗಳು, ಭರತ್ ಶೆಟ್ಟಿ ಅವರು ಹಿಂದೂ ಕಾರ್ಯಕರ್ತರ ಹೋರಾಟದ ದಿಕ್ಕನ್ನು ತಪ್ಪಿಸಿರುವುದು. ಇದಾದ ಬಳಿಕ ಅವರು ಹೇಳಿರುವ ಹೇಳಿಕೆಗಳು ಗೊಂದಲವನ್ನು ಸೃಷ್ಟಿಸುತ್ತಿದೆ. ಇವೆಲ್ಲವೂ ಭರತ್ ಶೆಟ್ಟಿ ಅವರೇ ನೀಡುತ್ತಿರುವ ಹೇಳಿಕೆಗಳಾ ಅಥವಾ ಭರತ್ ಶೆಟ್ಟಿ ಅವರ ಹಿಂದೆ ಬೇರಾದರೂ ಇದ್ದರಾ, ಇವೆಲ್ಲಾ ಸಂಶಯಕ್ಕೆ ಎಡೆ ಮಾಡಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಘಟನೆ ಬಗ್ಗೆ ಗೊತ್ತಾದ ಕೂಡಲೇ ಭರತ್ ಶೆಟ್ಟಿ ಅವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಾಗಿತ್ತು. ಘಟನೆಯನ್ನು ತಡೆಯುವಂತಹ ಕೆಲಸ ಮಾಡಬೇಕಿತ್ತು. ಗೊತ್ತಿದ್ದು ಯಾಕೆ ಸುಮ್ಮನಿದ್ದರು. ಇದರಲ್ಲಿ ಏನೂ ಹುನ್ನಾರಾ ಇದೆ ಎನ್ನುವುದರ ಕುರಿತು ತನಿಖೆ ನಡೆದರೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

ಸ್ನೇಹ ಸಮ್ಮಿಲನ ಕಾರ್ಯಕ್ರಮವೇ ಹಿಂದೂಗಳ ದಾರಿ ತಪ್ಪಿಸಿರೋದು. ಇದು ಮುಸ್ಲಿಂ ಮುಖಂಡರು ಸೇರಿ ಮಾಡಿರುವ ಹೋರಾಟವಾಗಿದೆ. ಭರತ್ ಶೆಟ್ಟಿ ಆಡಿಯೋ ಬಗ್ಗೆ ಕಮೀಷನರ್ ಅವರು ಭರತ್ ಶೆಟ್ಟಿ ಅವರನ್ನು ಕರೆಸಿ ಮಾತಾನಾಡಲಿ. ಘಟನೆ ಕುರಿತು ತನಿಖೆಯಾಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ

Share This Article
Leave a Comment

Leave a Reply

Your email address will not be published. Required fields are marked *