ಅಂಗನವಾಡಿ ಬಳಿ ಆಟವಾಡುತ್ತಿದ್ದಾಗ ತಗುಲಿದ ಕಬ್ಬಿಣದ ತಂತಿ – ಮಗುವಿನ ಮರ್ಮಾಂಗಕ್ಕೆ 6 ಹೊಲಿಗೆ

1 Min Read

ಚಿಕ್ಕಮಗಳೂರು: ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ಮಗುವಿನ ಕಬ್ಬಿಣದ ತಂತಿ ತಗುಲಿ 6 ಹೊಲಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು (Chikkamagaluru) ನಗರದ ಗೌರಿಕಾಲುವೆ ಬಡಾವಣೆಯಲ್ಲಿ ನಡೆದಿದೆ.

- Advertisement -

ಗೌರಿ ಕಾಲುವೆಯ ಅಮೃತಾ ಎಂಬ ಪೋಷಕರು ತಮ್ಮ ಮಗುವನ್ನ ಅಂಗನವಾಡಿಗೆ ಕಳುಹಿಸಿದ್ದರು. ಮಗು ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿತ್ತು. ಈ ವೇಳೆ ಮುಂಭಾಗದ ಮರಕ್ಕೆ ಹಾಕಿದ್ದ ಕಬ್ಬಿಣದ ತಂತಿ ಮಗುವಿಗೆ ತಾಗಿದೆ. ಪರಿಣಾಮ ಮರ್ಮಾಂಗದಲ್ಲಿ ರಕ್ತಸಾವ್ರವಾಗಿದೆ. ಆದರೆ ಅಂಗನವಾಡಿ ಶಿಕ್ಷಕಿ ಪೋಷಕರಿಗೆ ಯಾವುದೇ ಮಾಹಿತಿ ನೀಡದೇ ಬೇರೆ ಮಗುವಿನ ಜೊತೆ ಗಾಯಗೊಂಡ ಮಗುವನ್ನ ಮನೆಗೆ ಕಳಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಮಂಟಪಗಳಿಗೆ ಗ್ಯಾಸ್‌ ಟ್ರಬಲ್‌ – ಮದ್ವೆ ಮನೆಯರೇ ತರಬೇಕು ಸಿಲಿಂಡರ್!

- Advertisement -

- Advertisement -

ಮನಗೆ ಬಂದ ಬಳಿಕವೂ ಮಗು ಆಳುತ್ತಿದ್ದದ್ದನ್ನು ಗಮನಿಸಿದ ತಾಯಿ ಹತ್ತಿರ ಹೋಗಿ ನೋಡಿದಾಗ ರಕ್ತಸ್ರಾವವಾಗುತ್ತಿರುವುದು ಗೊತ್ತಾಗಿದೆ. ಕೂಡಲೇ ಮಗುವನ್ನ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

- Advertisement -

ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಮಗುವಿನ ಮರ್ಮಾಂಗಕ್ಕೆ ಆರು ಹೊಲಿಗೆ ಹಾಕಿದ್ದಾರೆ. ಅಂಗನವಾಡಿಯಲ್ಲಿ ಶಿಕ್ಷಕಿಯ ಬೇಜವಾಬ್ದಾರಿಯಿಂದಲೇ ಮಗುವಿಗೆ ಹೀಗಾಗಿದೆ ಎಂದು ಪೋಷಕರು ಅಂಗನವಾಡಿ ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿತು ಯುದ್ಧದ ಬಿಸಿ

Share This Article