ಆರತಕ್ಷತೆ ವೇಳೆ ನಟಿ ಪ್ರಿಯಾಮಣಿ ಧರಿಸಿದ್ದ ನೀಲಿ ಗೌನ್ ವಿಶೇಷತೆ ಏನ್ ಗೊತ್ತಾ?

Public TV
1 Min Read

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ- ಮುಸ್ತಾಫ ರಾಜ್ ಸಿಂಪಲ್ ಮದುವೆ ಬಳಿಕ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯ ವೇಳೆ ನಟಿ ಧರಿಸಿದ್ದ ನೀಲಿ ಬಣ್ಣದ ಗೌನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ಎಲಾನ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆದ ಆರತಕ್ಷತೆಯಲ್ಲಿ ನಟಿ ಪ್ರಿಯಾಮಣಿ ನೀಲಿ ಬಣ್ಣದ ಎಲೆಕ್ಟ್ರಿಕ್ ಬ್ಲೂ ಗೌನ್ ತೊಟ್ಟಿದ್ದರು. ಅಲ್ಲದೇ ನಕ್ಷತ್ರದಂತೆ ಮಿನುಗುವ ನೆಕ್ಲೇಸ್, ಮ್ಯಾಚಿಂಗ್ ಕಿವಿಯೋಲೆ ಮತ್ತು ತೆಳು ಬ್ರೇಸ್ಲೆಟ್ ಧರಿಸಿ ಪ್ರಿಯಾಮಣಿ ಮಿಂಚಿದ್ದರು. ವಿಶೇಷವೆಂದರೆ ಈ ಗೌನ್‍ನಲ್ಲಿದ್ದ ಪುಟ್ಟ ಜೇಬಿನ ಮೇಲೆ ಪ್ರಿಯಾ-ಮುಸ್ತಫಾ ಎಂದು ಹೆಸರು ಬರೆಯಲಾಗಿದ್ದು, ಇದೀಗ ಸುದ್ದಿಯಾಗಿದೆ.

ಇದನ್ನೂ ಓದಿ: ಪ್ರಿಯಾಮಣಿ, ಮುಸ್ತಫಾ ರಾಜ್ ಸಿಂಪಲ್ ಮ್ಯಾರೇಜ್ ವಿಡಿಯೋ ನೋಡಿ

ಪೂರ್ಣಿಮಾ ಇಂದ್ರಜಿತ್ ಎಂಬವರು ಪ್ರಿಯಾಮಣಿಯ ಈ ಗೌನ್ ವಿನ್ಯಾಸ ಮಾಡಿದ್ದಾರೆ. ಮಲಯಾಳಂ ನಟಿ ಹಾಗೂ ನೃತ್ಯ ಕಲಾವಿದೆಯಾಗಿರುವ ಪೂರ್ಣಿಮಾ ಇಂದ್ರಜಿತ್ `ಪ್ರನಾಹ್’ ಡಿಸೈನರ್ ಸ್ಟೋರ್ ಮಾಲಕಿಯಾಗಿದ್ದಾರೆ. ಪ್ರಿಯಾಮಣಿ ನೀಲಿ ಗೌನ್ ತೊಟ್ಟು ಆರತಕ್ಷತೆಗೆ ಸಿದ್ಧವಾಗಿರುವ ಕೆಲವು ಚಿತ್ರಗಳನ್ನು ಪೂರ್ಣಿಮಾ ಇಂದ್ರಜಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಗೌನ್ ಡಿಸೈನ್ ಮಾಡಿದ್ದು ಹೇಗೆ ಎಂಬುದನ್ನು ವಿವರಿಸುವ ವಿಡಿಯೊವೊಂದನ್ನು ಕೂಡ ಶೇರ್ ಮಾಡಿದ್ದಾರೆ.

https://www.instagram.com/p/BYQjG9sgwrx/?taken-by=poornimaindrajith

https://www.instagram.com/p/BYQJl8CANkb/?taken-by=poornimaindrajith

ಇದನ್ನೂ ಓದಿ: ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ಜೊತೆ ಸಿಂಪಲ್ ಮ್ಯಾರೇಜ್

https://www.instagram.com/p/BYPmgEnAvkE/?taken-by=poornimaindrajith

https://www.instagram.com/p/BYN4V8ggZ0Q/?taken-by=poornimaindrajith

https://www.instagram.com/p/BYNsVtagJH0/?taken-by=poornimaindrajith

https://www.instagram.com/p/BYNjN6QgCDv/?taken-by=poornimaindrajith

 

Share This Article
Leave a Comment

Leave a Reply

Your email address will not be published. Required fields are marked *