ವರ್ಷಧಾರೆಗೆ ಮುಳುಗಿದ ಸಿಲಿಕಾನ್‍ಸಿಟಿ- ರಾಜ್ಯದ ಈ ಜಿಲ್ಲೆಗಳಲ್ಲೂ ಭರ್ಜರಿ ಮಳೆ

Public TV
2 Min Read

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿಯೂ ಭರ್ಜರಿ ಮಳೆಯಾಗಿದೆ. ಒಮ್ಮೆ ಗುಡುಗು, ಮಿಂಚು ಸಮೇತ ಜೋರಾಗಿ ಬಂದ್ರೆ ಮತ್ತೊಮ್ಮೆ ಜಡಿಯಂತೆ ಹನಿದಿದೆ.

ಇದ್ರಿಂದ ಸಿಲಿಕಾನ್ ಸಿಟಿ ಜನ ರಾತ್ರಿಯೆಲ್ಲಾ ಪರದಾಡುವಂತಾಗಿತ್ತು. ಅದರಲ್ಲೂ, ವಾಹನ ಸವಾರರು ಪರದಾಡುವಂತಾಗಿತ್ತು. ಮಳೆಗಾಲ ಅಂತ ಗೊತ್ತಿದ್ದರೂ ಪದೇ ಪದೇ ಅವಾಂತರಗಳು ಸೃಷ್ಟಿಯಾದ್ರೂ ಬೆಂಗಳೂರು ಮಹಾನಗರ ಪಾಲಿಕೆ, ಅಧಿಕಾರಿಗಳು, ಮತ್ತು ಸಚಿವರು ಎಚ್ಚೆತ್ತುಕೊಂಡಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶನಿವಾರ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ನೀರೋ ನೀರು. ರಸ್ತೆಗಳಲ್ಲಾ ನದಿಗಳಂತಾಗಿದ್ದವು. ಅಪಾರ್ಟ್‍ಮೆಂಟ್‍ಗಳು ಜಲಾವೃತವಾಗಿದ್ದವು. ದಕ್ಷಿಣ ಬೆಂಗಳೂರಿನ ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್, ಸಿಲ್ಕ್‍ಬೋರ್ಡ್, ಬೇಗೂರು, ಬೆಳ್ಳಂದೂರು, ವರ್ತೂರು, ಓಫಾರಂ, ಚನ್ನಸಂದ್ರ, ವಿಶ್ವಪ್ರಿಯ ಲೇಔಟ್, ಎಸ್‍ಟಿ ಬೆಡ್ ಲೇಔಟ್, ಕಸ್ತೂರಿನಗರ, ವಿಜಯನಗರ, ಚಂದ್ರಾಲೇಔಟ್, ಜ್ಞಾನಭಾರತಿ, ಕಾಮಾಕ್ಷಿಪಾಳ್ಯ, ಅತ್ತ ಹೊಸಕೋಟೆ, ಆನೇಕಲ್, ನೆಲಮಂಗಲ ಈ ಎಲ್ಲಾ ಕಡೆ ಮಳೆ ಸುತ್ತಿ ಬಳಸಿ ಸುರಿದಿದೆ.

ತಡರಾತ್ರಿ ಜಾರ್ಜ್ ಕೆಲ ಪ್ರದೇಶಗಳಲ್ಲಿ ಪರೀಶೀಲನೆ ನಡೆಸಿದ್ರು. ಇನ್ನು ಇವತ್ತೂ ಸಹ ಭರ್ಜರಿ ಮಳೆಯಾಗುತ್ತೆ ಅಂತ ಹವಾಮಾನ ಮುನ್ಸೂಚನೆ ನೀಡೋ ಖಾಸಗಿ ಸಂಸ್ಥೆ ಸ್ಕೈಮೇಟ್ ಹೇಳಿದೆ.

ಇದನ್ನೂ ಓದಿ: ರಾತ್ರಿಯಿಡೀ ಸುರಿದ ಮಳೆಗೆ ಬೆಂಗ್ಳೂರು ತತ್ತರ- ಕೆರೆಯಂತಾದ ರಸ್ತೆಗಳು, ಮನೆಗಳಿಗೆ ನುಗ್ಗಿದ ನೀರು

ಇತರ ಜಿಲ್ಲೆಯಲ್ಲಿ ಕೂಡ ಮಳೆರಾಯ ಶನಿವಾರ ಅವಾಂತರ ಸೃಷ್ಟಿಸಿದ್ದಾನೆ. ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲ, ರಾಮನಗರಗಳಲ್ಲಿ ಭರ್ಜರಿ ಮಳೆಯಾಗಿದೆ. ರಸ್ತೆಗಳೆಲ್ಲಾ ನದಿಗಳಂತಾಗಿವೆ. ಅತ್ತ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಬಿಸಿಲು ನಾಡು ವಿಜಯಪುರ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಶುರುವಾಗಿದೆ.

ಮಹಾರಾಷ್ಟ್ರದ ಕೊಯ್ನಾ ಹಾಗೂ ಉಜನಿ ಜಲಾಶಯಗಳು ಉಕ್ಕಿ ಹರಿಯುತ್ತಿರುವುದರಿಂದ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮೂಡಿಸಿದೆ. ಭೀಮಾ ಹಾಗೂ ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಗ್ರಾಪಂ ಪಿಡಿಓ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; ಚಿಕಿತ್ಸೆಗಾಗಿ ಪ್ರವಾಹದಲ್ಲಿ ಪ್ರಾಣ ಪಣಕ್ಕಿಟ್ಟು ಈಜಿ ದಡ ಸೇರಿದ

https://www.youtube.com/watch?v=3m0KvN-RWzE

https://www.youtube.com/watch?v=iMerarHyDDY

https://www.youtube.com/watch?v=y5yb_FnU7QA

https://www.youtube.com/watch?v=cVXipXG6Isc

https://www.youtube.com/watch?v=zRuiyxC3flQ

https://www.youtube.com/watch?v=fgmuVSxeOYI

 

Share This Article
Leave a Comment

Leave a Reply

Your email address will not be published. Required fields are marked *