ಬೆಂಗಳೂರು: ರಾಜ್ಯದ ಹಲವೆಡೆ ಬೇಸಿಗೆ ಮಧ್ಯೆ ಆಲಿಕಲ್ಲು (Hailstorm) ಸಹಿತ ಮಳೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಗಾಳಿ ಸಹಿತ ಸುರಿದ ಮಳೆ (Rain) ಕಾದ ಭೂಮಿಯನ್ನ ತಂಪು ಮಾಡಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಬೇಸಿಗೆ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ನಾನಾ ಅವಾಂತರಗಳು ಸೃಷ್ಟಿ ಆಗಿದೆ.
ದಾವಣಗೆರೆ ತಾಲೂಕು ಗುಡಾಳು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಗುಡಾಳು ಗ್ರಾಮ ಮಿನಿ ಕಾಶ್ಮೀರದಂತೆ ಭಾಸವಾಗಿದೆ. ಹೆಬ್ಬಾಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಇದನ್ನೂ ಓದಿ: ಉಪಚುನಾವಣೆ: ಯುಗಾದಿ ಹಬ್ಬದಂದೇ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ
ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ಭರ್ಜರಿ ಮಳೆಯಾಗಿದೆ. 180ರಿಂದ 210 ಗ್ರಾಂ ತೂಕದ ಆಲಿಕಲ್ಲುಗಳು ಬಿದ್ದಿದ್ದು, ಜನ ಅಚ್ಚರಿಗೊಂಡಿದ್ದಾರೆ. ಬೆಳೆದ ಬೆಳೆಗೂ ಆಲಿಕಲ್ಲು ಮಳೆ ಕಂಟಕತಂದೊಡ್ಡಿದೆ. ಇದನ್ನೂ ಓದಿ: ಇರಾನ್‌ನ ಸೌತ್ ಪಾರ್ಸ್ ಮೇಲೆ ಇನ್ಮುಂದೆ ದಾಳಿ ನಡೆಯಲ್ಲ, ಇಸ್ರೇಲ್ ದಾಳಿ ಬಗ್ಗೆ ಗೊತ್ತಿಲ್ಲ: ಟ್ರಂಪ್
ಬಿರುಗಾಳಿ ಸಹಿತ ಮಳೆಗೆ ಹಾರಿದ ಶಾಲೆ ಮೇಲ್ಚಾವಣಿ:
ಮೈಸೂರು ಜಿಲ್ಲೆಯಲ್ಲಿ ಭಾರಿ ಮಳೆ ಪರಿಣಾಮ ಹುಣಸೂರು ತಾಲೂಕು ದಾಸನಪುರ ಗ್ರಾಮದಲ್ಲಿನ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಶಿಕ್ಷಕಿ ಸುಮಾ ಅವರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಘಟನೆ ವೇಳೆ ಮಕ್ಕಳು ಶಾಲಾ ಕೊಠಡಿ ಒಳಗೆ ಕೂತಿದ್ದರು. ತಕ್ಷಣ ಶಿಕ್ಷಕಿ ಸುಮಾ ಎಲ್ಲಾ ಮಕ್ಕಳನ್ನು ಡೆಸ್ಕ್ ಕೆಳಗೆ ಕೂರಿಸಿದ್ದಾರೆ. ಹೀಗಾಗಿ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕತಾರ್‌ನ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ಬೆಳೆ:
ಗಡಿ ಜಿಲ್ಲೆಯ ರೈತರಿಗೆ ಆಲಿಕಲ್ಲು ಮಳೆ ಆಘಾತವುಂಟು ಮಾಡಿದೆ. ಚಾಮರಾಜನಗರ ಗ್ರಾಮಾಂತರ ಪ್ರದೇಶದಲ್ಲಿ ಆಲಿಕಲ್ಲು ಮಳೆಗೆ ಮೆಣಸಿನಕಾಯಿ, ಟೊಮ್ಯಾಟೊ, ಕಲ್ಲಂಗಡಿ, ಬಾಳೆ ಸೇರಿ ಹಲವು ಬೆಳೆಗೆ ಹಾನಿಯಾಗಿದೆ. ಚಾಮರಾಜನಗರ ತಾಲೂಕಿನ ಉತ್ತುವಳ್ಳಿ, ಕಾಡಳ್ಳಿ, ಸಂತೇಮರಹಳ್ಳಿ, ಬಸವಟ್ಟಿ ಸೇರಿದಂತೆ ಹಲವು ಗ್ರಾಮಸ್ಥರ ಬೆಳೆ ನಾಶವಾಶಗಿದೆ. ಇದನ್ನೂ ಓದಿ: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ – ಕೆ.ಆರ್ ಮಾರ್ಕೆಟ್ ತುಂಬಾ ಜನವೋ ಜನ
ಮೆಗ್ಗಾನ್ ಆಸ್ಪತ್ರೆ ಬಳಿ ಬೃಹತ್ ಮರ ಧರೆಗೆ:
ಶಿವಮೊಗ್ಗ ನಗರದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಬೃಹತ್ ಮರ ಧರೆಗುರುಳಿದಿದೆ. ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆಟೋ ಸಂಪೂರ್ಣ ಜಖಂ ಆಗಿದೆ. ಮರ ಬೀಳುವುದನ್ನ ನೋಡಿ, ತಕ್ಷಣ ಆಟೋ ಬಿಟ್ಟು ಓಡಿರುವ ಚಾಲಕ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ವಿಶ್ವದಾದ್ಯಂತ ‘ಧುರಂಧರ್ 2’ ರಿಲೀಸ್ – ರಣವೀರ್ ಸಿಂಗ್ ಕಮಾಲ್
ಬಿರುಗಾಳಿ ಮಳೆಗೆ ನೇಮ್ ಬೋರ್ಡ್ ಪಿಲ್ಲರ್ ಧರೆಗೆ:
ಬೆಂಗಳೂರು ಹೊರವಲಯದ ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ಬಿರುಗಾಳಿ ಮಳೆಗೆ ನೇಮ್ ಬೋರ್ಡ್ ಪಿಲ್ಲರ್ ಧರೆಗೆ ಉರುಳಿದೆ. ನಗರಸಭೆ ನಿರ್ಮಾಣ ಮಾಡಿದ್ದ ನಾಮಫಲಕದ ಬೋರ್ಡ್ ಇದ್ದಾಗಿದ್ದು, ಜನರು ಸಂಚಾರ ಮಾಡುವಾಗಲೇ ಬೃಹತ್ ನೇಮ್ ಪಿಲ್ಲರ್ ಬಿದಿದ್ದೆ. ಒಟ್ಟಾರೆ ರಾಜ್ಯದ ಹಲವೆಡೆ ಸುರಿದ ವರುಣ ನಾನಾ ಅವಾಂತರಗಳನ್ನು ಸೃಷ್ಟಿಸಿದ್ದಲ್ಲದೇ ಬಿಸಿಲಿಗೆ ಬೆಂದಿದ್ದ ಭೂಮಿಗೂ ತಂಪೆರೆದಿದ್ದಾನೆ. ಇದನ್ನೂ ಓದಿ: ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ – ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ ಶಪಥ

