ಜ್ಞಾನವಾಪಿ ಪ್ರಕರಣ: ಇಂದು ಕೋರ್ಟ್ ತೀರ್ಪು – ವಾರಣಾಸಿಯಲ್ಲಿ ಬಿಗಿಭದ್ರತೆ

Public TV
3 Min Read

ವಾರಣಾಸಿ: ಜ್ಞಾನವಾಪಿ ಮಸೀದಿಯ (Gyanvapi Masjid) ಆವರಣದಲ್ಲಿ ಇದೆ ಎನ್ನಲಾದ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಯೋಗ್ಯವಾಗಿದಿಯೇ, ಇಲ್ಲವೇ ಎನ್ನುವ ಬಗ್ಗೆ ವಾರಣಾಸಿ (Varanasi) ಜಿಲ್ಲಾ ನ್ಯಾಯಲಯ ಇಂದು ತೀರ್ಪು (Verdict) ನೀಡಲಿದೆ.

GYANVAPI MOSQUE (1)

ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕೋಮು ಸೂಕ್ಷ್ಮ ಪ್ರಕರಣದ ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು. ಇದಕ್ಕೂ ಮುನ್ನ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲೆ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು. ಮಸೀದಿಯ ಜಾಗದಲ್ಲಿ ಮಂದಿರಾ ಇದೆ ಎಂದು ಕೆಲವರು ವಾದಿಸಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ- ದೂರುದಾರಳ ಪತಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆ

ಈ ನಡುವೆ ಐವರು ಮಹಿಳೆಯರು ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೇಟ್ಟಿಲೇರಿದ್ದರು. ಪ್ರಕರಣ ಗಂಭೀರವಾಗಿರುವ ಹಿನ್ನಲೆ ಸುಪ್ರೀಂಕೋರ್ಟ್ (Supreme Court) ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಸೂಚಿಸಿತ್ತು. ಈ ಐದು ಮಂದಿ ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಮಸೀದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಈ ಮಹಿಳೆಯರು ಸಲ್ಲಿರುವ ಅರ್ಜಿ ವಿಚಾರಣೆಗೆ ಯೋಗ್ಯವಾಗಿದಿಯೇ ಇಲ್ಲವೇ ಎನ್ನುವ ಬಗ್ಗೆ ಕೋರ್ಟ್ ಮೊದಲು ವಿಚಾರಣೆ ನಡೆಸಿತ್ತು, ಇಂದು ಈ ಬಗ್ಗೆ ಕೋರ್ಟ್ ಮೊದಲ ತೀರ್ಪು ನೀಡುತ್ತಿದೆ. ಈ ಅರ್ಜಿ ವಿಚಾರಣೆಗೆ ಯೋಗ್ಯವಾಗಿದ್ದಲ್ಲಿ ಮಾತ್ರ ಕೋರ್ಟ್ ಪೂಜೆಗೆ ಅವಕಾಶ ನೀಡಬೇಕಾ ಎನ್ನುವ ಅರ್ಜಿಯ ವಿಚಾರಣೆ ನಡೆಸಲಿದೆ.

ಈ ಹಿಂದೆ ಏನಾಗಿತ್ತು:
ಮುಸ್ಲಿಮರ ಪರ ವಾದ ಮಂಡಿಸಿದ ವಕೀಲರು 1991ರ ವಿಶೇಷ ಪೂಜಾ ಸ್ಥಳ ಕಾಯ್ದೆಯನ್ನು ಪ್ರಮುಖವಾಗಿ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ಧಾರ್ಮಿಕ ಸ್ವರೂಪವನ್ನು ಬದಲಿಸುವಂತಿಲ್ಲ. 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ಕಾಯಿದೆಯ ಅನ್ವಯ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ. ಜ್ಞಾನವ್ಯಾಪಿ ಮಸೀದಿ 16-17 ಶತಮಾನದ ಪುರಾತನ ಧಾರ್ಮಿಕ ಪ್ರದೇಶವಾಗಿರುವ ಈ ಹಿನ್ನಲೆ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ಪೂಜೆಗೆ ಅವಕಾಶ ನೀಡಿದ್ದಲ್ಲಿ ದೇಶದಲ್ಲಿ ಇಂತಹ ಹತ್ತಾರು ವಿವಾದಾತ್ಮಕ ಪ್ರದೇಶಗಳಲ್ಲೂ ಪೂಜೆ ಅವಕಾಶ ಕೇಳುವ ಸಾಧ್ಯತೆಗಳಿರುತ್ತದೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವಝುಖಾನದಲ್ಲಿ ಪತ್ತೆಯಾಗಿರುವುದು ನೀರಿನ ಕಾರಂಜಿ ಮತ್ತು ಅಲ್ಲಿ ಯಾವುದೇ ಶೃಂಗಾರ ಗೌರಿ ಮೂರ್ತಿಗಳಿಲ್ಲ, ಅದು ಹಳೆಯ ವಾಸ್ತು ಶಿಲ್ಪ ಶೈಲಿಯಾಗಿದೆ ಎಂದು ವಾದ ಮಂಡಿಸಿದ್ದರು. ಇದನ್ನೂ ಓದಿ: ಜ್ಞಾನವಾಪಿ ವಿವಾದ – ಶಿವಲಿಂಗ ಪೂಜೆಗಿಲ್ಲ ಅವಕಾಶ: ಸುಪ್ರೀಂ ಕೋರ್ಟ್

ಸೂಕ್ಷ್ಮ ವಿಚಾರವಾಗಿರುವ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ವಾರಣಾಸಿಯ ಜಿಲ್ಲಾ ಕೋರ್ಟ್ ಇಂದು ತನ್ನ ತೀರ್ಪು ಪ್ರಕಟ ಮಾಡಲಿದೆ. ಈ ಕಾರಣಕ್ಕಾಗಿ ಇಡೀ ನಗರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಿಶ್ರ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯುಲ್ಲಿ ನಿಯೋಜನೆಯಾಗಿದೆ. ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *