ಬಿಟ್ಟಿ ಆಶ್ವಾಸನೆ ನೀಡುವ ಪಕ್ಷವನ್ನು ಗುಜರಾತ್‌ನ ಜನರು ಕೈ ಬಿಟ್ಟಿದ್ದಾರೆ: AAPಗೆ ಶಾ ತಿರುಗೇಟು

Public TV
1 Min Read

ನವದೆಹಲಿ: ಗುಜರಾತ್‌ನಲ್ಲಿ (Gujarat) ಬಿಜೆಪಿ (BJP) ಅಭೂತಪೂರ್ವ ಜಯಗಳಿಸುತ್ತಿದ್ದಂತೆ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ಗುಜರಾತ್‌ನ ಜನರು ಬಿಟ್ಟಿ ಆಶ್ವಾಸನೆ ನೀಡುವ ಪಕ್ಷಗಳ ಕೈ ಬಿಟ್ಟಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಮ್ ಆದ್ಮಿ ಪಕ್ಷಕ್ಕೆ (AAP) ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಶಾ, ಉಚಿತ ಹಾಗೂ ತುಷ್ಟೀಕರಣದ ರಾಜಕೀಯ ಮಾಡುವವರನ್ನು ತಿರಸ್ಕರಿಸುವ ಮೂಲಕ ಗುಜರಾತ್‌ನ ಜನರು ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ನಿರೂಪಿಸುವ ನರೇಂದ್ರ ಮೋದಿಯವರ (Narendra Modi) ಬಿಜೆಪಿಗೆ ಅಭೂತಪೂರ್ವವಾದ ಗೆಲುವು ತಂದುಕೊಡುತ್ತಿದೆ.

ಮಹಿಳೆಯರು, ಯುವಕರು, ರೈತರು ಮಾತ್ರವಲ್ಲದೇ ಎಲ್ಲಾ ವರ್ಗದ ಜನರೂ ಬಿಜೆಪಿಯೊಂದಿಗಿದ್ದಾರೆ ಎಂಬುದನ್ನು ಈ ಬೃಹತ್ ಗೆಲುವು ತೋರಿಸಿಕೊಟ್ಟಿದೆ. ಗುಜರಾತ್ ಯಾವಾಗಲೂ ಇತಿಹಾಸವನ್ನು ಸೃಷ್ಟಿಸುತ್ತಾ ಬಂದಿದೆ. ಕಳೆದ 2 ದಶಕಗಳಲ್ಲಿ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ಎಲ್ಲಾ ರೀತಿಯ ಅಭಿವೃದ್ಧಿಯ ದಾಖಲೆಗಳನ್ನು ಮುರಿದಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಅಧಿಕಾರ – ಛತ್ತೀಸ್‌ಗಢಕ್ಕೆ ಶಾಸಕರು ಶಿಫ್ಟ್‌

ಗುಜರಾತ್‌ನಲ್ಲಿ ಇಂದು ಅಲ್ಲಿನ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ ಹಾಗೂ ವಿಜಯದ ಎಲ್ಲಾ ದಾಖಲೆಗಳನ್ನೂ ಮುರಿದಿದ್ದಾರೆ. ಇದು ಮೋದಿಯವರ ಅಭಿವೃದ್ಧಿ ಮಾದರಿಯಲ್ಲಿ ಸಾರ್ವಜನಿಕರ ಅಚಲ ನಂಬಿಕೆಯ ವಿಜಯವಾಗಿದೆ ಎಂದು ಅಮಿತ್ ಶಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿ 182 ಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಜ್ಜಾಗಿದೆ. 1985ರಲ್ಲಿ ಕಾಂಗ್ರೆಸ್‌ನ 149 ಸ್ಥಾನಗಳ ದಾಖಲೆಯನ್ನು ಬಿಜೆಪಿ ಮುರಿದಿದೆ. ಕಾಂಗ್ರೆಸ್ 20 ಸ್ಥಾನಕ್ಕಿಳಿದು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪ್ರಬಲ ಸವಾಲನ್ನು ಎದುರಿಸಿ, ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿಯಾಗಿ ಚುನಾವಣೆ ನಡೆಸಿದ ಎಎಪಿ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಗುಜರಾತ್‌ ಚುನಾವಣೆ – ಕಾಂಗ್ರೆಸ್‌ ಹೀನಾಯ ಸೋಲಿಗೆ ಕಾರಣ ಏನು?

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *