ಕೆನಡಾದಲ್ಲಿ ಚಳಿಗೆ ಗುಜರಾತ್ ಮೂಲದ ನಾಲ್ವರು ಸಾವು

Public TV
1 Min Read

ವಾಷಿಂಗ್ಟನ್: ಕೆನಡಾ ಗಡಿಯಿಂದ ಅಮೆರಿಕಕ್ಕೆ ನುಸುಳಲು ಯತ್ನಿಸುವ ವೇಳೆ ಮೈನಸ್ 35 ಡಿಗ್ರಿ ಸೆ. ಚಳಿಯನ್ನು ತಾಳಲಾರದೇ ಗುಜರಾತ್ ಮೂಲದ ಕುಟುಂಬವೊಂದು ಸಾವನ್ನಪ್ಪಿದೆ.

ದುರ್ಘಟನೆಯಲ್ಲಿ ಒಂದು ಮಗು, ಇಬ್ಬರು ವಯಸ್ಕರು ಮತ್ತು ಒಬ್ಬರು ಹದಿಹರೆಯದವರು ಮೃತಪಟ್ಟಿದ್ದಾರೆ. ಈ ಕುಟುಂಬ ಮೂಲತಃ ಗುಜರಾತ್‍ನ ಗಾಂಧಿನಗರ ಜಿಲ್ಲೆಯ ಕಲೋಲ್ ತೆಹ್ಸಿಲ್‍ನ ಹಳ್ಳಿಯವರಾಗಿದ್ದಾರೆ.

ಇವರ ಶವಗಳು ಕೆನಡಾ ಗಡಿಯಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಅಮೆರಿಕದಲ್ಲಿ ಪತ್ತೆಯಾಗಿತ್ತು. ಅಮೆರಿಕ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಗುಂಪಿನಿಂದ ಈ ಕುಟುಂಬ ಬೇರ್ಪಟ್ಟ ಕಾರಣ ದಾರಿಕಾಣದೇ ಚಳಿಗೆ ಸಿಲುಕಿ ಸತ್ತಿರಬಹುದೆಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಈ ಗುಂಪಿನಲ್ಲಿದ್ದ ಇನ್ನೂ ಏಳು ಜನರನ್ನು ಯುಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಗ್ರಾಮದ ನಿವಾಸಿಯೊಬ್ಬರು ಈ ಬಗ್ಗೆ ಮಾತನಾಡಿ, ನಾಲ್ವರ ಕುಟುಂಬವಿದ್ದ ಗ್ರಾಮದ ನಿವಾಸಿಗಳ ಜೊತೆಗೆ ಇನ್ನೂ ಮೂರು-ನಾಲ್ಕು ಕುಟುಂಬಗಳು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಾವು ಅವರ ಫೋಟೋವನ್ನು ಹಾಗೂ ವಿವರಗಳನ್ನು ವಿದೇಶಾಂಗ ಸಚಿವಾಲಯಕ್ಕೆ ಮೇಲ್ ಮಾಡಿದ್ದೇವೆ ಎಂದು ತಿಳಿಸಿದರು.

ಮ್ಯಾನಿಟೋಬಾ ತಲುಪಿದ ಕೆನಡಾದಲ್ಲಿರುವ ನಮ್ಮ ಸ್ನೇಹಿತರೊಂದಿಗೆ ನಾವು ಸಂಪರ್ಕವನ್ನು ಮಾಡಿದ್ದೇವೆ. ಆದರೆ ಕೆನಡಾದ ಅಧಿಕಾರಿಗಳು ದೃಢೀಕರಣಕ್ಕಾಗಿ ಅವರನ್ನು ಆಸ್ಪತ್ರೆ ಒಳಗೆ ಅನುಮತಿಸುತ್ತಿಲ್ಲ ಎಂದು ಹೇಳಿದರು.  ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ

ಘಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಯುಎಸ್ ಅಧಿಕಾರಿಗಳೊಂದಿಗೆ ಸಂಪರ್ಕಸಿದ್ದಾರೆ. ಬಂಧಿತ ಏಳು ಮಂದಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಭಾರತೀಯ ಅವರಲ್ಲಿ ಒಬ್ಬ ಮಹಿಳೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಕ್ಯಾಂಟರ್‌ಗೆ ಸ್ಕೂಟರ್ ಡಿಕ್ಕಿ, ಇಬ್ಬರು ಸಾವು

Share This Article
Leave a Comment

Leave a Reply

Your email address will not be published. Required fields are marked *