ಕೇಂದ್ರದಿಂದ ತುರ್ತು ಅಧಿಕಾರ ಬಳಕೆ – ಎಲ್‍ಪಿಜಿ ಉತ್ಪಾದನೆ ಹೆಚ್ಚಿಸಲು ಸಂಸ್ಕರಣಾ ಘಟಕಗಳಿಗೆ ಆದೇಶ

1 Min Read

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದ (Israel Iran war) ಎಲ್‌ಪಿಜಿ (LPG) ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಅಡುಗೆ ಇಂಧನದ ಕೊರತೆಯನ್ನು ತಡೆಗಟ್ಟಲು ಎಲ್‍ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸುವಂತೆ ಸಂಸ್ಕರಣಾ ಘಟಕಗಳಿಗೆ ತುರ್ತು ಅಧಿಕಾರ ಬಳಸಿ ಕೇಂದ್ರ ಸರ್ಕಾರ ಆದೇಶಿಸಿದೆ.

- Advertisement -

ಮನೆಗಳಿಗೆ ವಿತರಿಸುವ ಎಲ್‍ಪಿಜಿಗಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‍ಗಳಿಗೆ ಪ್ರೋಪೇನ್ ಮತ್ತು ಬ್ಯುಟೇನ್ ಲಭ್ಯವಾಗುವಂತೆ ನೋಡಿಕೊಳ್ಳಲು ಉತ್ಪಾದಕರಿಗೆ ಸೂಚಿಸಿದೆ.

- Advertisement -

ವಿಶ್ವದ 2ನೇ ಅತಿ ದೊಡ್ಡ ಎಲ್‍ಪಿಜಿ ಆಮದು ದೇಶವಾಗಿರುವ ಭಾರತವು (India) ಕಳೆದ ವರ್ಷ 33.15 ಮಿಲಿಯನ್ ಮೆಟ್ರಿಕ್‌ ಟನ್ ಅಡುಗೆ ಅನಿಲವನ್ನು ಬಳಸಿದೆ. ದೇಶದಲ್ಲಿ ಬಳಕೆಯಾಗುತ್ತಿರುವ ಎಲ್‍ಪಿಜಿಯಲ್ಲಿ ಆಮದುಗಳು ಸುಮಾರು ಮೂರನೇ ಎರಡರಷ್ಟು ಪಾಲು ಹೊಂದಿದೆ. ಈ ಪೈಕಿ ಸುಮಾರು ಶೇ.85-90ರಷ್ಟನ್ನು ಮಧ್ಯಪ್ರಾಚ್ಯವು ಪೂರೈಸುತ್ತದೆ.

- Advertisement -

- Advertisement -

ಸರ್ಕಾರಿ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 33.20 ಕೋಟಿ ಸಕ್ರಿಯ ಎಲ್‍ಪಿಜಿ ಗ್ರಾಹಕರಿದ್ದಾರೆ. ಎಲ್‍ಪಿಜಿ ಉತ್ಪಾದನೆಗಾಗಿ ಕಡ್ಡಾಯವಾಗಿ ಪ್ರೋಪೇನ್ ಮತ್ತು ಬ್ಯುಟೇನ್ ಬಳಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್‍ನಿಂದ ಗ್ಯಾಸೋಲಿನ್ ಮಿಶ್ರಣ ಘಟಕದಲ್ಲಿ ಉತ್ಪಾದನೆಯನ್ನು ಮೊಟಕುಗೊಳಿಸಿತ್ತು. ಈ ರೀತಿ ಕೊರತೆ ಉಂಟಾಗುವುದನ್ನು ತಡೆಯಲು ಪೆಟ್ರೋಕೆಮಿಕಲ್‍ಗಳ ಉತ್ಪಾದನೆಗೆ ಪ್ರೋಪೇನ್ ಮತ್ತು ಬ್ಯುಟೇನ್ ಪೂರೈಸದಂತೆಯೂ ಸರ್ಕಾರ ಸಂಸ್ಕರಣಾಗಾರಗಳಿಗೆ ಆದೇಶಿಸಿದೆ.

Share This Article