ವಾಷಿಂಗ್ಟನ್: ಸೋಮವಾರ ಇರಾನ್ನೊಂದಿಗೆ (Iran) ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ನಾಳೆ ಒಳ್ಳೆಯ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಅವರು ಈಗ ಮಾತುಕತೆ ನಡೆಸುತ್ತಿದ್ದಾರೆ. ಅವರು ಒಪ್ಪಂದ ಮಾಡಿಕೊಂಡು ಬೇಗ ನಿರ್ಧಾರ ತೆಗೆದುಕೊಳ್ಳದಿದ್ದರೆ, ನಾನು ಎಲ್ಲವನ್ನೂ ಗಾಳಿಗೆ ತೂರಿ ತೈಲವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ಫೈಟರ್ ಜೆಟ್ನಿಂದ ಬಿದ್ದ ಪೈಲಟ್ನನ್ನು ಅಮೆರಿಕ ನಿಖರವಾಗಿ ಇರಾನ್ ನೆಲದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದು ಹೇಗೆ?
ತನ್ನ ಗಡುವಿಗೆ ಡೋಂಟ್ ಕೇರ್ ಎನ್ನುತ್ತಿರುವ ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಕಟುವಾಗಿ ಗುಡುಗಿದ್ದರು. ಅತ್ಯಂತ ಕೆಟ್ಟ ಪದಗಳನ್ನೇ ಬಳಸಿ ಇರಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹಾರ್ಮುಜ್ ಜಲಸಂಧಿಯನ್ನು ಓಪನ್ ಮಾಡಿ, ಇಲ್ಲವೇ ಇರಾನ್ಗೆ ನರಕ ದರ್ಶನ ಆಗುತ್ತದೆ ಎಂದು ಎಚ್ಚರಿಸಿದ್ದರು.
ಫೆ.28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಯುದ್ಧ ನಡೆಸಿದವು. ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾದರು. ಇರಾನ್ ಪ್ರತೀಕಾರವಾಗಿ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕ ಮಿಲಿಟರಿ ಬೇಸ್ಗಳ ಮೇಲೆ ತೀವ್ರ ದಾಳಿಗಳನ್ನು ನಡೆಸುತ್ತಿದೆ. ಯುದ್ಧ ಆರಂಭವಾಗಿ 35ಕ್ಕೂ ಹೆಚ್ಚು ದಿನ ಕಳೆದರೂ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇದನ್ನೂ ಓದಿ: ಇರಾನ್ ನೆಲದಲ್ಲಿ ತನ್ನ 927 ಕೋಟಿಯ 2 ವಿಮಾನಗಳನ್ನು ಸುಟ್ಟು ಹಾಕಿದ ಅಮೆರಿಕ
ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ತನ್ನ ಹತೋಟಿಗೆ ತೆಗೆದುಕೊಂಡಿದೆ. ಪರಿಣಾಮವಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸಮರ್ಪಕ ಕಚ್ಚಾ ತೈಲ, ಅನಿಲ ಪೂರೈಕೆ ಆಗದೇ ಸಂಕಷ್ಟಕ್ಕೆ ಸಿಲುಕಿವೆ.

