ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್

Public TV
2 Min Read

ನವದೆಹಲಿ: ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಅವರನ್ನು ಎಎಪಿಗೆ ಆಹ್ವಾನಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಬಿಜೆಪಿಯು ಪರಿಕ್ಕರ್ ಕುಟುಂಬದೊಂದಿಗೆ ಯೂಸ್ ಅಂಡ್ ಥ್ರೋ ನೀತಿಯನ್ನು ಅನುಸರಿಸುತ್ತಿದೆ. ಇದರಿಂದ ಗೋವಾ ಜನರಿಗೆ ತೀವ್ರ ಬೇಸರ ಉಂಟುಮಾಡಿದೆ. ನಾನು ಮನೋಹರ್ ಪರಿಕ್ಕರ್ ಅವರನ್ನು ಯಾವಾಗಲೂ ಗೌರವಿಸುತ್ತೇನೆ. ಉತ್ಪಲ್ ಅವರಿಗೆ ಗೋವಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಎಪಿಯಿಂದ ಟಿಕೆಟ್ ನೀಡುವುದಾಗಿ ಎಂದು ಟ್ವೀಟ್ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿಯು 34 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಉತ್ಪಲ್ ಪರಿಕ್ಕರ್ ಹೆಸರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಉತ್ಪಲ್ ಪರಿಕ್ಕರ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವರು ಒಪ್ಪಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದರು.

ಟಿಕೆಟ್ ಸಿಕ್ಕಿಲ್ಲ ಯಾಕೆ?: ಪರಿಕ್ಕರ್ ಕುಟುಂಬ ಯಾವಾಗಲೂ ನಮ್ಮ ಕುಟುಂಬವಿದ್ದಂತೆ. ಮನೋಹರ್ ಪರಿಕ್ಕರ್ ಅವರ ಸ್ಥಾನವಾದ ಪಂಜಿಮ್‍ನಿಂದ ಉತ್ಪಾಲ್ ಸ್ಪರ್ಧಿಸಲು ಬಯಸಿದ್ದರು. ಆ ಸ್ಥಾನವನ್ನು ಈಗಾಗಲೇ ಹಾಲಿ ಶಾಸಕರಿಗೆ ನೀಡಲಾಗಿದೆ. ಆದರೆ ಹಾಲಿ ಶಾಸಕರನ್ನು ಕೈಬಿಡುವುದು ಸರಿಯಲ್ಲ. ಆದರೆ, ನಾವು ಅವರಿಗೆ ಆಯ್ಕೆಯನ್ನು ನೀಡಿದ್ದೇವೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ನೀಡಿದ್ದು, ಆ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದರು.

ಉತ್ಪಾಲ್ ಅವರಿಗೆ ಇದು ರಾಜಕೀಯಕ್ಕಿಂತ ಹೆಚ್ಚು ಭಾವನಾತ್ಮಕ ವಿಷಯವಾಗಿರುವುದರಿಂದ ಬೇರೆ ಯಾವುದೇ ಸ್ಥಾನದಿಂದ ಸ್ಪರ್ಧಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಕಳೆದ ಒಂದು ತಿಂಗಳಲ್ಲಿ ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಮನವೊಲಿಸಲು ಯತ್ನಿಸಿದ್ದರು.  ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

ಶಿವಸೇನೆ ಸಂಸದ ಸಂಜಯ್ ರಾವುತ್ ಮಾತನಾಡಿ, ಮನೋಹರ್ ಪರಿಕ್ಕರ್ ಅವರ ಮಗ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೆ ಉತ್ಪಾಲ್ ಅವರ ಅಭ್ಯರ್ಥಿಯನ್ನು ಎಲ್ಲಾ ಬಿಜೆಪಿಯೇತರ ಪಕ್ಷಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

ಉತ್ಪಲ್ ಪರಿಕ್ಕರ್ ಅವರು ಇತ್ತೀಚೆಗೆ ಮಾತನಾಡಿ, 1994ರಿಂದ ತಂದೆಯೊಂದಿಗೆ ಇದ್ದ ಬಿಜೆಪಿ ನಾಯಕರು ಈಗಲೂ ಅವರನ್ನು ಬೆಂಬಲಿಸುತ್ತಿದ್ದಾರೆ. ಅವರು ತಮ್ಮ ತಂದೆಯ ಮರಣದ ನಂತರ ಪಣಜಿಯ ಮತದಾರರನ್ನು ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ದಿವಂಗತ ಮನೋಹರ್ ಪರಿಕ್ಕರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗೆ ಪಕ್ಷ ಟಿಕೆಟ್ ನೀಡುವುದೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಗೋವಾ ಚುನಾವಣೆಗೆ ಕೆಲವೇ ವಾರಗಳಿದ್ದು, ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಾಂಕ್ವೆಲಿಮ್‍ನಿಂದ ಸ್ಪರ್ಧಿಸಿದರೆ, ಉಪಮುಖ್ಯಮಂತ್ರಿ ಮನೋಹರ್ ಅಜಗಾಂವ್‍ಕರ್ ಮಾಗಾರ್ಂವ್‍ನಿಂದ ಸ್ಪರ್ಧಿಸುವುದು ಖಚಿತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *