ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ

Public TV
2 Min Read

ಬೆಳಗಾವಿ: ನವಲಗುಂದ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಹಿರಿಯ ನಾಯಕ ಕೋನರೆಡ್ಡಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೋನರೆಡ್ಡಿ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಸ್ವಾಗತಿಸಲಾಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೋನರೆಡ್ಡಿ, ನಾನು ಜೆಡಿಎಸ್‍ಗೆ ಇಂದು ರಾಜೀನಾಮೆ ಕಳುಹಿಸಿದ್ದೇನೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ, ನಾನು ಸಿದ್ದರಾಮಣ್ಣ ಅಂದಿದ್ದೆ. ಆಗ ನಾನು ಸಿದ್ದರಾಮಣ್ಣ ಅಂತಾ ಏಕವಚನದಲ್ಲಿ ಅಂದಿದ್ದೆ. ಆ ರೀತಿ ಅಂದಿದ್ದನ್ನ ನಾನು ಅಂದು ಕಡತದಿಂದ ತಗೆಯುವಂತೆ ಮಾಡಿದ್ದೆ. ಆಗ ಸಿದ್ದರಾಮಯ್ಯ ಅವರು, ನೀನೂ ನನಗೆ ಸಿದ್ದರಾಮಣ್ಣ ಇನ್ಯಾರು ಅಂತಾ ಹೇಳಿದ್ರು ಎಂದು ತಿಳಿಸಿದರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

ಡಿಕೆ ಶಿವಕುಮಾರ್ ಒಂದು ತರಹ ಕುದುರೆ ಇದ್ದ ಹಾಗೆ. ನಾನು ಎಲ್ಲೆ ಇದ್ರು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನಾನು ಜೆಡಿಎಸ್ ಬಿಡಬೇಕು ಅಂತಾ ಇರಲಿಲ್ಲ. ಕ್ಷೇತ್ರದ ಜನರು ಒತ್ತಾಯ ಮಾಡಿದ್ರು. ಹೀಗಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಬೇಕಾಯ್ತು ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರಯ ನನ್ನನ್ನು ಹೋಗಬೇಡ ಅಂದ್ರು. ಆಗ ನಾನು ಕ್ಷೇತ್ರದ ಜನರ ಒತ್ತಾಯ ಮೇರೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದೇನೆ. ಪಕ್ಷವನ್ನ ನಾನು ತಾಯಿ ಎಂದು ತಿಳಿದುಕೊಂಡು ಕೆಲಸ ಮಾಡಿದ್ದೇನೆ. ನಾನು ನಾಲ್ಕು ಬಾರಿ ಸ್ಪರ್ಧೆ ಮಾಡಿ ಗೆಲುವು ಕಂಡವನು. ಪ್ರಧಾನಿ ಮೋದಿ ಅಲೆಯಿಂದ ಕಳೆದ ಬಾರಿ ಸೋಲು ಕಂಡೆ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಹೋರಾಟ ಸ್ಪೂರ್ತಿ ಆಯ್ತು. ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರ ರೈತ ಪರ ನಿಲುವು ಕಂಡು ಕಾಂಗ್ರೆಸ್ ಸೇರ್ಪಡೆಯಾದೆ. ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ ಎಂದು ಭರವಸೆಯ ಮಾತುಗಳನ್ನು ನುಡಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಕೋನರೆಡ್ಡಿ ಅವರಿಗೆ ಇವತ್ತು ದೊಡ್ಡ ಭಾಗ್ಯ ಸಿಕ್ಕಿದೆ. ಬೆಳಗಾವಿಯ ಕಚೇರಿಯಲ್ಲಿ ನಾನು ಕೋನರೆಡ್ಡಿ ಅವರ ವಿಚಾರವಾಗಿ ಎಐಸಿಸಿಗೂ ತಿಳಿಸಿ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕಡೆ ದಳ ಕಟ್ಟುವುದು ಸರಳ. ಆದ್ರೆ ಕೋನರೆಡ್ಡಿ ಅವರ ಶಕ್ತಿಯಿಂದ ದಳ ಕಟ್ಟಿದ್ರು. ನಾವೂ ಎನೂ ಆಪರೇಷನ್ ಹಸ್ತ ಆರಂಭಿಸಿಲ್ಲ. ಪಕ್ಷದ ಸಿದ್ಧಾಂತಗಳನ್ನ ಒಪ್ಪಿಕೊಂಡು ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.

DK SHIVAKUMAR

ಧಾರವಾಡ, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಸದಸ್ಯರು ಹೆಚ್ಚಿರುವ ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ನಾವು ಸೋಲು ಕಂಡಿರುವ ಕಡೆಗೂ ಉತ್ತಮ ಬೆಂಬಲ ದೊರೆತಿದೆ. ರಾಜ್ಯದ ಜನರ ಅಭಿಪ್ರಾಯ ಮುಂದಿನ ದಿನಗಳಲ್ಲಿ ಬದಲಾವಣೆ ಬಳಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ತಮ್ಮ ಕಾರ್ಯದ ಬಗ್ಗೆ ತಿಳಿಸಿದರು. ಇದನ್ನೂ ಓದಿ: 263 ಪಾಸಿಟಿವ್, 7 ಸಾವು – ಇಂದು 2,25,152 ಜನರಿಗೆ ಲಸಿಕೆ

ಕಾಂಗ್ರೆಸ್ ಸದಸ್ಯರು ಸದಸ್ಯತ್ವ ನೊಂದಣಿ ಮಾಡಿಸಬೇಕು. ನಮ್ಮ ಪಕ್ಷದ ಮೇಲೆ ಭರವಸೆ ಇಟ್ಟು ಕೋನರೆಡ್ಡಿ ಅವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದಿಂದ ಕೋನರೆಡ್ಡಿಗೆ, ಕೋನರೆಡ್ಡಿಯಿಂದ ಪಕ್ಷಕ್ಕೆ ಬಲ ಬಂದಿದೆ. ನಮ್ಮ ಹುಡುಗರನ್ನ ಜೊತೆಗೆ ಇಟ್ಟುಕೊಂಡು ಕೆಲಸ ಮಾಡಬೇಕು. ನೀವು ನಮ್ಮ ಹುಡುಗರನ್ನ ಕೈಬಿಟ್ಟರು ನಾನು ಅವರನ್ನ ಕೈಬಿಡಲ್ಲ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.

Share This Article
Leave a Comment

Leave a Reply

Your email address will not be published. Required fields are marked *