ಸುಮಲತಾರ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ – ಹೆಚ್‌ಡಿಕೆ

Public TV
2 Min Read

ಹಾಸನ: ಸುಮಲತಾ (Sumalatha) ಬಿಜೆಪಿ (BJP) ಸೇರ್ಪಡೆ ಬಗ್ಗೆ ನಾವೇನು ಪ್ರಾಮುಖ್ಯತೆ ಕೊಡಬೇಕಾದ ಅವಶ್ಯಕತೆ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಅವರು ಬಹಳ ದೊಡ್ಡವರಿದ್ದಾರೆ. ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಅವರು ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ.ಡಿ.ಕುಮಾರಸ್ವಾಮಿ (H.D.Kumaraswamy) ತಿರುಗೇಟು ನೀಡಿದರು.

ಹಾಸನ (Hassan) ಜಿಲ್ಲೆಯ ಬೇಲೂರಿನಲ್ಲಿ (Beluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇನು ಅಚ್ಚರಿಯಾದ ಸುದ್ದಿ ಅಲ್ವಲ್ಲ. ಈ ವಿಷಯ ಯಾರಿಗೇನು ಅಚ್ಚರಿ ಮೂಡಿಸುವ ಸುದ್ದಿ ಅಲ್ಲ. ಅವರು ಏನು ಮಾತನಾಡಿದ್ದಾರೆ ಅದಕ್ಕೆ ರಿಯಾಕ್ಷನ್ ಕೊಡೋದು ಸೂಕ್ತ ಅಲ್ಲ ಅನ್ನೋದು ನನ್ನ ಅಭಿಪ್ರಾಯ.‌ ಮಂಡ್ಯ ಜಿಲ್ಲೆಯ ಜನತೆ ತೀರ್ಮಾನ ಮಾಡಿಕೊಳ್ಳುತ್ತಾರೆ. ಇದಕ್ಕೂ ನನಗೂ ಸಂಬಂಧವಿಲ್ಲ. ಅವರು ದೊಡ್ಡಮಟ್ಟಕ್ಕೆ ಬೆಳೆದಿರುವವರು. ದೊಡ್ಡ ಪಕ್ಷಕ್ಕೆ ಸೇರುತ್ತಿದ್ದಾರೆ. ನಾನೊಬ್ಬ ಸಣ್ಣವನು. ಅವರ ಬಗ್ಗೆ ಮಾತನಾಡಲು ಸಾಧ್ಯವಾ? ಆದ್ದರಿಂದ ಅದರ ಮಾತನಾಡುವ ಅವಶ್ಯಕತೆ ನನಗಿಲ್ಲ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಊರಲ್ಲಿರೋ ಮಕ್ಕಳೆಲ್ಲಾ ನನ್ನವೇ ಅಂದ್ರೆ ಕಾಲಲ್ಲಿರೋದು ಕೈಗೆ ತಗೋತಾರೆ – ಸಿ.ಟಿ ರವಿ ಕಿಡಿ

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಹಣ ತಂದಿದ್ದೇನೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ತಂದಿರಬಹುದು, ನನ್ನ ಕೇಳಿದ್ರೆ ನಾನು ಏನು ಹೇಳಲಿ? ಅದನ್ನ ಮಂಡ್ಯ ಜಿಲ್ಲೆಯ ಜನ ಹೇಳಬೇಕು. ಅಭಿವೃದ್ಧಿ ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಅವರು ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾನು ರಾಜ್ಯ ಸುತ್ತುತಿದ್ದೇನೆ. ನನ್ನ ಕೇಳಿದ್ರೆ ನಾನೆಲ್ಲಿ ಉತ್ತರ ಕೊಡಲಿ ಎಂದು ಹೇಳಿದರು.

ನಮ್ಮ ಭದ್ರಕೋಟೆಯಲ್ಲಿ ಅವರೇನಾದರು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಬಹಳ ಸಂತೋಷ. ನಮ್ಮ ಜನತೆ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ

ಅಕ್ರಮ ಗಣಿಗಾರಿಕೆಗೆ ಕೆಲವು ಶಾಸಕರು ಬೆಂಬಲ ಕೊಟ್ಟಿದ್ದಾರೆ ಎಂಬ ಸುಮಲತಾ ಆರೋಪಕ್ಕೆ ತಿರುಗೇಟು ನೀಡಿ, ಅದು ನನಗೆ ಗೊತ್ತಿಲ್ಲ. ಅವರನ್ನು ಕೇಳಿಕೊಳ್ಳಲು ಹೇಳಿ. ನನ್ನನ್ನ ಕೇಳಿದರೆ, ಅದಕ್ಕೆಲ್ಲ ನಾನೇನು ಹೇಳಲಿ. ನಾನು ಈ ರಾಜ್ಯದಲ್ಲಿ ಎರಡು ಭಾರಿ ಮುಖ್ಯಮಂತ್ರಿ ಆದಾಗಲೂ ಯಾವುದೇ ಅಕ್ರಮಗಳಿಗೆ ಬೆಂಬಲ ಕೊಟ್ಟವನಲ್ಲ. ನಮ್ಮ ಪಕ್ಷದ ಶಾಸಕರೇ ಇರಲಿ, ಯಾರು ಏನೇ ವ್ಯವಹಾರ ಮಾಡಿದರೂ ಅಕ್ರಮಗಳಿಗೆ ನಾನಂತೂ ಬೆಂಬಲ ಕೊಟ್ಟಿಲ್ಲ. ನಾನು ಪರಿಶುದ್ಧವಾಗಿಯೇ ಇದ್ದೇನೆ. ಬೇರೆ ವಿಷಯಗಳನ್ನು ಕಟ್ಟಿಕೊಂಡು ನನಗೇನು ಆಗಬೇಡಿಕೆ ಎಂದು ತಿಳಿಸಿದರು.

ನಾನು ಕುಟುಂಬಕ್ಕೋಸ್ಕರ ರಾಜಕಾರಣ ಮಾಡಲ್ಲ. ಸ್ವಾಭಿಮಾನಕ್ಕೋಸ್ಕರ ರಾಜಕಾರಣ ಮಾಡ್ತೀನಿ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೊಬ್ಬರೇ ಸ್ವಾಭಿಮಾನಕ್ಕೆ ರಾಜಕಾರಣ ಮಾಡೋದು. ನಾವು ಮಾಡ್ತಿರೋದು ರಾಜ್ಯದ ಆರೂವರೆ ಕೋಟಿ ಜನತೆಗೋಸ್ಕರ. ಆರೂವರೆ ಕೋಟಿ ಜನತೆ ನನ್ನ ಕುಟುಂಬ. ಆ ಕುಟುಂಬಕ್ಕಾಗಿ ರಾಜಕೀಯ ಮಾಡ್ತಿದ್ದೇನೆ ಎಂದರು. ಇದನ್ನೂ ಓದಿ: ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ

Share This Article
Leave a Comment

Leave a Reply

Your email address will not be published. Required fields are marked *