ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಕಾರಿನಲ್ಲೇ ತಂದಿದ್ದ ಪಾಪಿ ತಂದೆ!

Public TV
1 Min Read

ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ಘಟನೆ ದಾವಣಗೆರೆ (Davanagere) ಯಲ್ಲಿ ಬೆಳಕಿಗೆ ಬಂದಿದೆ.

ಅದ್ವೈತ್ (04) ಹಾಗೂ ಅನ್ವೀತ್ (04) ಸಾವನ್ನಪ್ಪಿದ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನ ಕೊಂದ ಪಾಪಿ ತಂದೆ. ಮೂಲತಃ ಗೋಕಾಕ ನಿವಾಸಿಯಾಗಿರುವ ಈತ ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು. ಇದನ್ನೂ ಓದಿ: 20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS

ಹರಿಹರದ ಕಾರ್ಗಿಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಎಂಜಿನಿಯರ್ ಆಗಿದ್ದ ಅಮರ, ಪತ್ನಿ ಜಯಲಕ್ಷ್ಮಿ ತವರು ಮನೆ ವಿಜಯಪುರಕ್ಕೆ ಹೋಗಿದ್ದಳು. ಪತ್ನಿ ತವರಿಗೆ ಹೋಗುವುದಕ್ಕೂ ಮುನ್ನ ಅಮರ ತನ್ನಿಬ್ಬರು ಮಕ್ಕಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್ ಗಳನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಇಬ್ಬರೂ ಮಕ್ಕಳ ಬಾಯಿಗೆ ಟಿಕ್ಸೋ ಟೇಪ್ ಹಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ಮಕ್ಕಳ ಶವವನ್ನ ಕಾರಿನಲ್ಲಿಯೇ ತಂದಿದ್ದ. ಇತ್ತ ಮಕ್ಕಳ ಸಾವಿನ ಬಗ್ಗೆ ಸಂಶಯ ಬಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತನಿಖೆಯ ವೇಳೆ ಮಕ್ಕಳನ್ನು ಕೊಲೆ ಮಾಡಿದ್ದಾಗಿ ಅಮರ ಒಪ್ಪಿಕೊಂಡಿದ್ದಾನೆ. ಮಕ್ಕಳ ಕೊಲೆಗೆ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article