ಮಳೆಗೆ 3ನೇ ದಿನದಾಟ ಅಂತ್ಯ; 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 96 ರನ್‌ ಮುನ್ನಡೆ – ಕನ್ನಡಿಗ ಕೆ.ಎಲ್.ರಾಹುಲ್‌ ಆಸರೆ

By
1 Min Read

– ಆಂಗ್ಲರ ಪಡೆಯ 5 ವಿಕೆಟ್‌ ಕಬಳಿಸಿ ಮಿಂಚಿದ ಬುಮ್ರಾ

ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದ 3ನೇ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ 471 ರನ್‌ ಗಳಿಸಿತ್ತು. ನಂತರ ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 465ಕ್ಕೆ ಆಲೌಟ್‌ ಆಯಿತು.

2ನೇ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಭಾರತವು 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 47 ರನ್‌ ಗಳಿಸಿರುವ ರಾಹುಲ್‌ ಅಜೇಯರಾಗಿ ಉಳಿದಿದ್ದಾರೆ. ಅವರಿಗೆ ಶುಭಮನ್‌ ಗಿಲ್‌ ಸಾಥ್‌ ನೀಡಲಿದ್ದಾರೆ.

ಒಲಿ ಪೋಪ್‌ ಶತಕ
ಇಂಗ್ಲೆಂಡ್‌ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿತ್ತು. ಒಲಿ ಪೋಪ್‌ ಶತಕ ಗಳಿಸಿ ಮಿಂಚಿದ್ದರು. ಭಾನುವಾರ 3ನೇ ದಿನದಾಟದಲ್ಲಿ ಶತಕಕ್ಕೆ ಕೇವಲ 6 ರನ್‌ ಗಳಿಸಿ ಬೇಗನೆ ಔಟಾದರು. ಬಳಿಕ ಬ್ರೂಕ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ 99 ರನ್‌ ಗಳಿಸಿದರು. ಶತಕದ ಹೊಸ್ತಿಲಲ್ಲಿದ್ದ ಅವರನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಔಟ್‌ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್‌ 465 ಕ್ಕೆ ಆಲೌಟ್‌ ಆಯಿತು.

ಬೌಲಿಂಗ್‌ನಲ್ಲಿ ಬುಮ್ರಾ ಪರಾಕ್ರಮ
ಭಾರತ ಪರ ಜಸ್ಪ್ರಿತ್‌ ಬುಮ್ರಾ ಬೌಲಿಂಗ್‌ನಲ್ಲಿ ಪರಾಕ್ರಮ ಮೆರೆದರು. 83 ರನ್‌ ನೀಡಿ ಪ್ರಮುಖ 5 ವಿಕೆಟ್‌ ಕಿತ್ತು ಮಿಂಚಿದರು. ಪ್ರಸಿದ್ಧ ಕೃಷ್ಣ 3, ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಪಡೆದರು.

Share This Article