ಅಣ್ಣನಿಗೆ ಆಗದೇ ಇರೋರು ಹಗರಣ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು: ಸಿಎಂ ಸಹೋದರ

Public TV
1 Min Read

ಮಂಡ್ಯ/ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ತಪ್ಪು ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಅವರು ರಾಜೀನಾಮೆ ಕೊಡುವುದು ನಮಗೆ ಇಷ್ಟ ಇಲ್ಲ. ನಮ್ಮ ಅಣ್ಣನಿಗೆ ಆಗದೇ ಇರುವವರು ಹಗರಣ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ (Siddegowda) ಹೇಳಿದ್ದಾರೆ.

ಮೈಸೂರಿನ (Mysuru) ಸಿದ್ದರಾಮನ ಹುಂಡಿಯಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಏನಾದರೂ ಮಾಡಿ ಕೆಡವಬೇಕೆಂದು ಹೀಗೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರ ವಿರುದ್ಧ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಈಗ ಸೈಟ್ ಹಿಂದಕ್ಕೆ ಕೊಡುತ್ತಿದ್ದಾರೆ ಎಂದು ಹೇಳುತ್ತಾರೆ. ತಪ್ಪು ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಪಾರ್ವತಮ್ಮ ಅವರಿಗೆ ಕುಂಕುಮ ರೂಪದಲ್ಲಿ ಜಮೀನು ಕೊಟ್ಟಿರೋದು ನಮಗೆ ಗೊತ್ತಿಲ್ಲ. ವಿಜಯನಗರದಲ್ಲಿ ಸೈಟ್ ಕೊಟ್ಟಿರೋದು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

ಸಿದ್ದರಾಮಯ್ಯ ಅವರಿಗೂ ಈ ವಿಚಾರ ಗೊತ್ತಿಲ್ಲ. ಈಗ ಅವರನ್ನು ರಾಜೀನಾಮೆ ಕೇಳಿದರೆ ಹೇಗೆ ಕೊಡೋಕೆ ಆಗುತ್ತೆ. 40 ವರ್ಷದಿಂದ ಸಿದ್ದರಾಮಯ್ಯ ಕೆಟ್ಟ ಹೆಸರು ತಗೊಂಡಿರಲಿಲ್ಲ. ಈಗ ಇವರು ಆರೋಪ ಮಾಡುತ್ತಿದ್ದಾರೆ. ನಮ್ಮ ಬಳಿ ಇರೋದು ಎಲ್ಲಾ ಪಿತ್ರಾರ್ಜಿತ ಆಸ್ತಿ. ನಾವು ಖರೀದಿ ಮಾಡಿದ ಜಮೀನು ಇಲ್ಲ. ಸಿದ್ದರಾಮಯ್ಯ ಅವರು ಈ ಬಗ್ಗೆ ನಮ್ಮ ಜೊತೆ ಏನೂ ಹೇಳಿಕೊಂಡಿಲ್ಲ. ಅವರು ನೊಂದಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಗದಗದಲ್ಲಿ ಜೆಡಿಎಸ್ ಪ್ರೊಟೆಸ್ಟ್

Share This Article