-ಈವರೆಗೂ 320 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
-2,300 ಕೋಟಿಗೂ ಅಧಿಕ ಅಕ್ರಮ ಆಗಿರೋದು ಪತ್ತೆ
ಬೆಂಗಳೂರು: ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ (Veerendra Puppy) ವಿರುದ್ಧ ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಕೃಷಿ ಜಮೀನು, ನಿವೇಶನ ಸೇರಿದಂತೆ 177.3 ಕೋಟಿ ಆಸ್ತಿಯನ್ನು ಇ.ಡಿ (ED) ಮುಟ್ಟುಗೋಲು ಹಾಕಿಕೊಂಡಿದೆ.
ತನಿಖೆ ವೇಳೆ ಕೆಸಿ ವೀರೇಂದ್ರ ಮತ್ತು ಸಹಚರರು ಮಾಸ್ಟರ್ ಮೈಂಡ್ ಅನ್ನೋದು ದೃಢವಾಗಿದೆ. ನೂರಾರು ಬೇನಾಮಿ ಖಾತೆ (ಮ್ಯೂಲ್ ಅಕೌಂಟ್) ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. 177.3 ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ್ದು ಅನ್ನೋದು ಪತ್ತೆಯಾಗಿದ್ದು, ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಆಸ್ತಿ ಸೀಜ್ ಮಾಡಲಾಗಿದೆ. ಇದನ್ನೂ ಓದಿ: ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ – 51 ಕೋಟಿ ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ವಶ
ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ಇಡಿ ದಾಳಿ ನಡೆಸಿ ಚಿನ್ನ, ನಗದು, ಬೆಳ್ಳಿ, ವಾಹನಗಳನ್ನ ವಶಪಡಿಸಿಕೊಂಡಿತ್ತು. 177.3 ಕೋಟಿ ರೂ. ಸೇರಿ ಈವರೆಗೆ ಒಟ್ಟಾರೆ ಪ್ರಕರಣದಲ್ಲಿ 320 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೇ ತನಿಖೆ ವೇಳೆ 2,300 ಕೋಟಿ ರೂ. ಅಧಿಕ ಅಕ್ರಮ ನಡೆದಿರೋದು ಪತ್ತೆಯಾಗಿದ್ದು, ಇ.ಡಿ. ತನಿಖೆ ಮುಂದುವರಿದಿದೆ.

