ಕುಡಿವ ನೀರಿಗಾಗಿ ಸಚಿವ ತಂಗಡಗಿ ಕಾರಿಗೆ ಗ್ರಾಮಸ್ಥರ ಮುತ್ತಿಗೆ 

1 Min Read
ಕೊಪ್ಪಳ: ಕುಡಿಯುವ ನೀರಿಗಾಗಿ ಸಚಿವ ಶಿವರಾಜ ತಂಗಡಗಿಯವರ (Shivaraj Tangadagi) ಕಾರನ್ನು ಗ್ರಾಮಸ್ಥರು ಅಡ್ಡಗಟ್ಟಿ ಪ್ರತಿಭಟಿಸಿದ ಘಟನೆ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ನಡೆದಿದೆ.
ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿ ಭೂಮಿ ಪೊಜೆ ನೇರವರಿಸಿ ಸಚಿವರು ತೆರುಳುತ್ತಿದ್ದರು. ಈ ವೇಳೆ ಸಂಕನಾಳ ಗ್ರಾಮದ ಮಹಿಳೆಯರು ಜಿಲ್ಲಾ ಉಸ್ತುವಾರಿ ವಾಹನ ಅಡ್ಡಗಟ್ಟಿ ಖಾಲಿ ಕೊಡ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಎನ್ಐಸಿಯು ಘಟಕ ಸ್ಥಾಪನೆಗೆ ಕೇಂದ್ರದಿಂದ 5 ಕೋಟಿ ಅನುದಾನ: ಬಿವೈಆರ್
ಈಗ್ರಾಮದಲ್ಲಿ ನೂರಕ್ಕು ಹೆಚ್ಚು ಮನೆಗಳಿವೆ. ಗ್ರಾಮೀಣ ಭಾಗದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಳಲು ತೊಡಗಿಕೊಂಡರು. ಈ ವೇಳೆ ಗ್ರಾಮಸ್ಥರಾದ ನೀಲಮ್ಮ, ಪಾರ್ವತಿ, ಮಲ್ಲಮ್ಮ, ಕಮಲಾಕ್ಷಿ, ಚಂದ್ರಮ್ಮ, ಅಕ್ಕ ನಾಗಮ್ಮ, ನಾಗರಾಜ ಪಂಪಾಪತಿ ಶಂಕ್ರಪ್ಪ ಬಿರನಗೌಡ ಶರಣಪ್ಪ ಬಸವರಾಜ ಇತರರು ಇದ್ದರು. ಇದನ್ನೂ ಓದಿ: ಕೋಮುಲ್ ಕಚೇರಿ ಮೇಲೆ ದಿಢೀರ್ ʻಲೋಕಾʼ ದಾಳಿ – ದಾಖಲೆಗಳ ಪರಿಶೀಲನೆ
Share This Article