ಇರಾನ್‌ ನಮಗೆ ದೊಡ್ಡ ಗಿಫ್ಟ್‌ ಕೊಟ್ಟಿದೆ: ಹಾರ್ಮುಜ್‌ ಓಪನ್‌ ಬಗ್ಗೆ ಟ್ರಂಪ್‌ ಸುಳಿವು

1 Min Read

ವಾಷಿಂಗ್ಟನ್: ಇರಾನ್‌ (Iran) ನಮಗೆ ದೊಡ್ಡ ಗಿಫ್ಟ್‌ ಕೊಟ್ಟಿದೆ ಎಂದು ಹಾರ್ಮುಜ್‌ ಓಪನ್‌ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸುಳಿವು ನೀಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಹೊಸ ಹೇಳಿಕೆ ನೀಡಿರುವ ಟ್ರಂಪ್‌, ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಂತಾಗಿದೆ. ಇರಾನ್ ನಿನ್ನೆ ಅದ್ಭುತವಾದ ಕೆಲಸ ಮಾಡಿದೆ. ನಮಗೆ ಇರಾನ್ ದೊಡ್ಡ ಉಡುಗೊರೆ ನೀಡಿದೆ. ತೈಲ, ಅನಿಲ ಸಂಬಂಧಿಸಿದ ಗಿಫ್ಟ್ ಕೊಟ್ಟಿದೆ. ಇರಾನ್ ಅಮೆರಿಕಕ್ಕೆ ತೈಲ, ಅನಿಲಕ್ಕೆ ಸಂಬಂಧಿಸಿದ ಹಾರ್ಮುಜ್ (Strait of Hormuz) ಉಡುಗೊರೆ ನೀಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಟ್ರಂಪ್‌ ಕಾಲ್‌ – ಮಧ್ಯಪ್ರಾಚ್ಯ, ಹಾರ್ಮುಜ್‌ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಮಹತ್ವದ ಮಾತುಕತೆ

ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಅಮೆರಿಕದ ಅಧ್ಯಕ್ಷರು ಐದು ದಿನಗಳವರೆಗೆ ಮುಂದೂಡಿದ್ದಾರೆ. ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕಾಗಿ ಇರಾನ್‌ನೊಂದಿಗೆ ಮಾತುಕತೆಗೆ ನಿರ್ಧರಿಸಿದ್ದಾರೆ. ಆದಾಗ್ಯೂ, ಇರಾನ್ ಯಾವುದೇ ಕದನ ವಿರಾಮಕ್ಕೆ ಸಂಬಂಧಿಸಿದ ಮಾತುಕತೆಗಳ ಭಾಗವಾಗುವುದನ್ನು ನಿರಾಕರಿಸಿದೆ‌ ಎನ್ನಲಾಗಿದೆ.

ನಿನ್ನೆ ಇರಾನ್ ಅದ್ಭುತವಾದ ಕೆಲಸ ಮಾಡಿದೆ. ಅದು ನಿಜಕ್ಕೂ ಅದ್ಭುತ. ಅವರು ನಮಗೆ ಉಡುಗೊರೆಯನ್ನು ನೀಡಿದರು. ಉಡುಗೊರೆ ಇಂದು ಬಂದಿದೆ. ಅದು ಅಪಾರ ಮೊತ್ತದ ಹಣದ ದೊಡ್ಡ ಉಡುಗೊರೆಯಾಗಿತ್ತು. ಆ ಉಡುಗೊರೆ ಏನೆಂದು ನಾನು ನಿಮಗೆ ಹೇಳುವುದಿಲ್ಲ. ಆದರೆ, ಅದು ಬಹಳ ಮಹತ್ವದ ಬಹುಮಾನವಾಗಿತ್ತು ಎಂದು ಟ್ರಂಪ್‌ ಶ್ವೇತಭವನದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ವಿನಾಯ್ತಿ ಬೆನ್ನಲ್ಲೇ ಇರಾನ್‌ನಿಂದ 50 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿಸಿದ ರಿಲಯನ್ಸ್

ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗ ಹಾದುಹೋಗುವ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಇದು ಸಂಬಂಧಿಸಿದೆಯೇ ಎಂದು ಕೇಳಿದಾಗ, ಟ್ರಂಪ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಜೊತೆಗೆ, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ ಎಂದು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

Share This Article